-- ಮೈನಾಶ್ರೀ 03-ಮೇ-2018
( ಹಾಲನ "ಗಾಹಾ ಸತ್ತಸಯಿ" ಯ ಒಂದು ಪದ್ಯದಿಂದ ಪ್ರೇರಿತ )
ಕನಸಿನಲಿ ಬಂದಿಹಳೆ ನಿನ್ನವಳು ಮರುಳೆ
ನನಸಿನಲಿ ಇಂದೇಕೆ ಮರುಗುವೆಯೊ ವಿರಹಿ
ನಿನಗಾದರುಂಟಲ್ಲೊ ನಿದಿರೆ ಕನಸುಗಳು
ಮನದಲ್ಲೆ ಮನೆಮಾಡಿ ನನ್ನವಳು ನಿಂದಿರಲು
ಚಣಚಣವು ನೆನಪಾಗಿ ಕಣ್ಣೆದುರು ಕಣ್ಣೊಳಗು
ನನಗೆಲ್ಲಿ ನಿದಿರೆಯೋ? ಕನಸಿನ್ನು ದೂರ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!