ಗುಂಡು ಮಾರಿಗೆ 

ನೇರ ಮುಗ್ಯಾಕ

ಮತ್ತದಕ ಮೂಗುತಿಯಾಕ 

ಹೊಳಪು ಕಂಗಳಿಗೆ 

ಕಪ್ಪು ಕಾಡಿಗಿಯಾಕ

ಕಣ್ಣಂಚಿನ್ಯಾಗ ಭಾವಗಳ ಮಿಂಚ್ಯಾಕ

ನೀಳ ಕೂದಲಿಗೆ 

ನಡುವೆ ಬೈತಲೆಯಾಕ

ಮುಡಿಯೊಳಗೆ ಮಲ್ಲಿಗೆಯ ಮಾಲ್ಯಾಕ

ಕೊರಳಾಗ ಮುತ್ತಿನ ಸರ 

ತುಟಿಯಾಗ ನಗೆಯ ಆಗರ 

ಯಾಕೆ ಈ ಶೃಂಗಾರ 

ಕಾಣುವ ಕಂಗಳಿಗೆ ಮಬ್ಬು ಕವಿದಿರುವಾಗ 

ಹೊನ್ನ ಒಲವಿಗೆ ಹೃದಯ ಸೋತಿರುವಾಗ!!!