ಮನ ಇಲ್ಲಿ ನಿಲ್ಲದ್ಯಾಕ
ನಾ ಒಲ್ಲೆ ಇಲ್ಲಿ ಇರಲಾಕ!
ನನ್ನ ಮನಿ ಅಲ್ಲೆದ, ನನ್ನ ತನದ ಬಳಗದ
ಮತ್ತ ಅವರೊಳಗ ಬಗೆ ಹರಿಯದ ಜಗಳದ.
ಬೀಸಿ ಬರುವ ಗಾಳಿಯೊಳಗ, ತೆಂಗು, ಮಾವು,
ಬಾಳೆ, ಅಡಿಕೆ, ಪೇರಲಗಳ ಉಸಿರದ.
ಕೆರೆಯ ಸುತ್ತಲ ಗಿಡದ ಕೆಳಗೆ
ನೆರಳಿನ್ಯಾಗ, ಬಾಲ್ಯದ ಸವಿ-ನೆನಪದ.
ಮಣ್ಣಿನೊಳಗ, ಅಪ್ಪ-ಅಮ್ಮ ಮತ್ತವರ
ಅಪ್ಪ-ಅಮ್ಮರ ಹೆಜ್ಜೆ ಗುರುತವ.
ಅಲ್ಲೇ,ಅಲ್ಲೇ ಚೆಲುವದ ಆಳಕಿಳಿದ ಬೇರವ!!
--ಸರೋಜಿನಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!