1. ಆ ಕ್ಷಣಗಳು ....

ನನ್ನ ನೀನ್ನ ಮೋದಲ ಭೇಟಿ

ವಿಳಾಸವಿಲ್ಲದ ಅಂಚೆ ಚೀಟಿ....

ಖಾಲಿ ಚೀಟಿಯೋಳು ಮುಚ್ಚಿಟ್ಟಿ

ಪ್ರೀತಿ ಪ್ರಾರಂಭದ ಧಾಟಿ

ಮಾಡ್ತು ನಮ್ಮಿಬ್ಬರ ಹೃದಯ ಲೂಟಿ......

ನೆನಪಿದೆಯೇ ಗೆಳತಿ ಆ ಕ್ಷಣಗಳು.......

ನಾ ಬೇಡವೆಂದರೂ ನೀ ಮಾತಾಡುತ್ತಿದ್ದಿ

ಸಮಯವಿಲ್ಲ ಅಂದ್ರು ಸಮಯ ಸಾದ್ಸಿ

ಸಂಚರಿಸೋಣ ಅನ್ನುತ್ತಿದ್ದಿ.....

ಸ್ನೇಹ ಚಂದ ಅಂದ್ರೆ ಪ್ರೀತಿ ಅಂದ

ಅಂತ ಪರಿತಪಿಸುತಿದ್ದಿ....

ನೆನಪಿದೆಯೇ ಗೇಳತಿ ಆ ಕ್ಷಣಗಳು.....

ನಿನ್ನ ಹಪ - ಹಪಿ ನೋಡೆ

ಅನುದಿನ ಹತ್ತಿರಿರುವಿ ಅಂದುಕೊಂಡೆ ...

ಆದ್ರ ಒಮ್ಮಿಂದೊಮ್ಮೇಲೆ ನೀ ಕಾಣೆ

ಕಾರಣ ಹೇಳದ ನಿ ಬಲು ಜಾಣೆ....

ಹೇಗೆ ಮರಿಲಿ ಗೆಳತಿ ಆ ಕ್ಷಣಗಳು ....

ನಾವಿಕನಿಲ್ಲದ ದೋಣಿ ಸಾಗಿಸಿ

ಏಕೆ ಮರೆಯಾದೆ ಮೂಖನಾಗಿಸಿ .....

ನಿನಿಲ್ಲದ ನಾನು ಚಂದಿರನಿಲ್ಲದ ಬಾನು

ಕೇಳು ಬೆಳದಿಂಗಳ ಬಾಲೆ

ಗುನಗುನಿಸುತ್ತಿರುವೆ ನಿನ್ನ ನೆನಪಲೆ......

ಆ ಕ್ಷಣದಿ ಈ ಕ್ಷಣವರೆಗೂ.....

ಗೆಳತಿ ನಿ ಕಾಣೇ ನನ್ನ ಬವಣೆ......

ರಾಮು ಎನ್ ರಾಠೋಡ್