ಏಳಿರಿ ಏಳಿರಿ ಎದ್ದೇಳಿರಿ 

ಹಣ ಕುರ್ಚಿ ಅಧಿಕಾರ ಎಂಬ 

ದಾಹವನ್ನು ಬಿಟ್ಟು ಮನುಷ್ಯರಾಗಿರಿ 

 

ನಮ್ಮ ಹಿರಿಯರು ನಮಗಾಗಿ ಜೀವತ್ತೆತು ಕೊಟ್ಟು ಹೋದ 

ಭರತ ನಾಡನ್ನು ಉಳ್ಳಿಸಿ ಬೆಳೆಸಲು ದುಡಿಯದಿದ್ದರೂ 

ಅಳಿಸಿ ಹರಿದು ಹಂಚಲೂ ಹೋರಾಡದಿರಿ... .....  

 

ನಿಮ್ಮ ನಿಮ್ಮ ಮನಗಳಲ್ಲಿ 

ಬೋಸ್ ಭಗತ್ ಅಂಬೇಡ್ಕರ್ ರಲ್ಲಿದ್ದಂತಹ ಚಿಂತನೆಗಳನ್ನು ನೆಟ್ಟು ಬೆಳಸದಿದ್ದರೂ 

ಮೋಸ ಧಗ ವಂಚನೆ ಎಂಬ ಬ್ರಿಟಿಷರನ್ನು ಬಂದು ನೆಲೆಸಲು ಬಿಡಬೇಡಿ........ 

 

ಪಾಂಡವರಂತಹ ನಾಯಕರನ್ನು ಅಧಿಕಾರಕ್ಕೆ ತರದಿದ್ದರೂ 

ಅಲ್ಪ ಆಸೆಗೆ ಬಲಿಯಾಗಿ ಕೌರವರಂತಹ ನಾಯಕರನ್ನು ಆರಿಸದಿರಿ 

ಮುಯಂಬರುವ ನಮ್ಮ ನಾಡಿನ ಪ್ರಜೆಗಳಾಗುವ 

 

ನಮ್ಮ ನಮ್ಮ ಮಕ್ಕಳುಗಳಿಗೆ 

ರಾಮ ರಾಜ್ಯವನ್ನು ನಿರ್ಮಾಣ ಮಾಡದಿದ್ದರೂ 

ರಾವಣ ರಾಜ್ಯವನ್ನು ಸೃಷ್ಟಿಸದಿರಿ.......