ಅಲೆಯಲ್ಲಿ ತೇಲುತ್ತ ...
ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ
ಹಾಯಿದೋಣಿ ನಾ ಕಂಡೆನೊ
ಚೆಲುವನ್ನು ನಾ ಉಂಡೆನೊ
ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ
ನೋಡುತಲೆ ಮರುಳಾದೆನೊ
ಸವಿನೋಟಕೆದುರಾದೆನೊ
ಉಬ್ಬರದ ನಡುವೆಯೂ ಪ್ರೀತಿ ಚಿಗಿದಿದೆ ನೋಡು
ಬಾಳ ಒಲುಮೆಯ ಕಂಡೆನೊ
ಕೈಹಿಡಿಯುತ ಕುಳಿತೆನೊ
ಕುಶಿಯ ಕಂಬದ ಬಳಿಯೆ ಕುಳಿತೆ ಅವಳಾ ಸನಿಹ
ನೋಡಿ ಮುಗುಳು ನಕ್ಕೆನೊ
ಮೈಮರೆತು ಗೆಲುವಾದೆನೊ
ಪ್ರೀತಿಯಲೆಯ ಶಬ್ದದೆದುರು ಬೇರೆಯೇನು ಕಾಣದಾದೆ
ಕನಸಿನಲ್ಲಿ ಒಲವನುಂಡೆನೊ
ಮನಸ ಕೊಟ್ಟು ಬೇಡಿಕೊಂಡೆನೊ
ಹಿತದ ಮಾತು ಆಡಿದಾಗ ಕಣ್ಣ ನೋಟ ಬೆರೆಸಿದಾಗ
ಮೌನ ಮುರಿದು ತಬ್ಬಿಕೊಂಡಳೊ
ಮುತ್ತನಿಟ್ಟು ಮದುವೆಯಾದಳೊ
***
ಗಝಲ್
ನನ್ನ ಮನಸು ನಿನ್ನ ಬಳಿಗೆ ಓಡಿಯಾಡಿ ಬಂದಿತು
ನಿನ್ನ ಕನಸ ಇರುಳಿನಲ್ಲಿ ಕಾಡಿಯಾಡಿ ಬಂದಿತು
ಕರುಣೆಯಿರದ ಮನದ ಒಳಗೆ ಹೇಗೆ ಸಾಗಲೆಂದಿತು
ಕುಶಿಯು ಇರದ ಜೊತೆಗೆ ಪ್ರೀತಿ ಆಡಿಯಾಡಿ ಬಂದಿತು
ಸವಿಯ ಜಾಣ ಸುತ್ತಲೆಲ್ಲ ನನಸು ಇರದೆ ಕೇಳದು
ಕೆಸರ ಸನಿಹ ಕಮಲವಿಂದು ಪಗಡೆಯಾಡಿ ಬಂದಿತು
ಒಸರು ಇರದ ಬಯಕೆಯೊಳಗೆ ಪ್ರೇಮ ಇಹುದೆ ಎಂದಿಗು
ಹಸಿರ ಚೆಲುವ ಎಲೆಯ ಪಕ್ಕ ನೀರೆಯಾಡಿ ಬಂದಿತು
ಇರದು ಮೌನ ಒಡೆಯ ಬಹುದು ಈಶನೊಲವು ಬಾಡದು
ಕುಂತು ನಡೆವ ಮಾತುಕತೆಲಿ ಸೇಲೆಯಾಡಿ ಬಂದಿತು
- ಹಾ ಮ ಸತೀಶ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!