ರಥಪುಷ್ಪದ ಮೇಲೇರಿ ಏನಾದರು ನಿರೀಕ್ಷಿಸಿದೆಯಾ ಹಕ್ಕಿಯೇ
ಚೆಲುವಿಕೆಯೇ ಮೂರ್ತಿವೆತ್ತಂತೆ ಮನದಲಿ ಸಿಂಗಾರವಾದೆಯಾ ಹಕ್ಕಿಯೇ
ಒಡಲು ತುಂಬಿಸಲು ಆಸೆಯಲಿ ಕಣ್ಣುಬಿಡುತಿರುವೆಯೇನು
ಮಡಿಲ ಕುಡಿಗಳಿಗೆ ಬದುಕ ನೀಡಲೆಂದು ಆಶಿಸಿದೆಯಾ ಹಕ್ಕಿಯೇ
ಕೆಂಬಣ್ಣದ ಮನೋಹರ ದೃಶ್ಯವು ಸೆಳೆದಿದೆಯಲ್ಲಾ
ಹೊಂಬಣ್ಣದ ಆಗಸದಿ ಸ್ವಚ್ಛಂದದಿ ವಿಹರಿಸಿದೆಯಾ ಹಕ್ಕಿಯೇ
ಪ್ರಕೃತಿಯ ಸುಂದರ ಸೊಬಗಿಗೆ ಸರಿ ಸಾಟಿಯಿದೆಯೇನು
ವಿಕೃತಿಯ ನೆನಪು ಕಾಡದಂತೆ ತಡೆದೆಯಾ ಹಕ್ಕಿಯೇ
ಹಾವು ಏಣಿ ಆಟವು ರತುನಳ ಬಾಳಲ್ಲಿದೆಯಲ್ಲಾ
ಠಾವು ಬೆಚ್ಚಗೆ ಇರಲೆಂದು ಬಯಸಿದೆಯಾ ಹಕ್ಕಿಯೇ
-ರತ್ನಾ ಭಟ್ ತಲಂಜೇರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!