ಮನೆಮನವೆಲ್ಲ ಹಬ್ಬಿತ್ತು ಸಂತಸದ ಹೊನಲು

ಸತಿಪತಿಯ ಪ್ರೇಮದ ಹೂ ಸಿದ್ದವಾಗಿತ್ತು ಅರಳಲು

 

ಹೃದಯಗಳಾಸೆ ಈಡೇರಿ ತುಂಬಿತು ಮಡಿಲು

ಮಗಳೆಂಬ ಹಣತೆಯಲಿ ಬೆಳಗಿತು ಬಾಳು

 

ಕರುಳ ಕುಡಿಯದು ಜೊತೆಗಿರಲು ಕಾಣದು ಬವಣೆ

ಅದರ ಒಡನಾಟದಲಿ ಮರೆಯಬಹುದು ನೋವನ್ನೆ

 

ತೊದಲು ನುಡಿಗಳ ಸವಿಮಾತುಗಳೇ ಹೆತ್ತವರ ಆಸ್ತಿ

ಯಾವ ಸಿರಿಸುಖದಲ್ಲೂ ಸಿಗಲಾರದು ಅಂಥ ತೃಪ್ತಿ

 

ತಾಯ ಎದೆಹಾಲ ಅಮೃತವೇ ಕಂದನಿಗೆ ಬಲವು

ತಾಯ್ತನದ ಸುಖವೇ ಹೆಣ್ಣಿಗೆ ದೇವನಿತ್ತ ವರವು

-ಸೌಮ್ಯ ಆರ್ ಶೆಟ್ಟಿ, ಮಂಜೇಶ್ವರ