ಎಷ್ಟು ಸುಂದರ ನಮ್ಮ ಪರಿಸರ
ತರಲಾರದು ಮನಕೆ ಬೇಸರ |
ಕಾಣುತಿಹುದು ನೀಲ ಗಗನವು
ತರುವುದು ಮನಕಾನಂದವು ||
ಕೈ ಬೀಸಿ ಕರೆಯುವುದು
ಬೆಟ್ಟ ಸಾಲಿನ ಚಾರಣ
ಎಲ್ಲೆಲ್ಲು ಗಿಡಮರ ತರುವುದು
ಹಚ್ಚ ಹಸಿರಿನ ತೋರಣ ||
ಪಳಪಳ ಹೊಳೆಯುವ ಜಲವು
ಬೆಟ್ಟದ ಮೇಲಿಂದ ಇಳಿಯುವ ಚಂದ |
ಕಾಡುಮೇಡು ಸುತ್ತಿ ಸುತ್ತಿ
ಜುಳು ಜುಳು ಹರಿಯುವ ಅಂದ ||
ತಂಪಾಗಿ ಬೀಸುವ ಗಾಳಿಯು
ನೀಡುತಿದೆ ಮನಕೆ ಮುದವು |
ಎಲ್ಲಿ ನೋಡಿದರಲ್ಲಿ ವಿಸ್ಮಯ
ಪ್ರಕೃತಿ ಮಾತೆಯ ಮಡಿಲು ||
-ಸುಭಾಷಿಣಿ ಚಂದ್ರ
ಚಿತ್ರ ರಚನೆ: ಸುರಕ್ಷಾ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!