ನಿನ್ನ ಬರುವಿಕೆಗೆ ಕಾದಿರುವೆ ಮೂರು ಹೊತ್ತು
ಜಗವೆ ಮರೆತಿರುವೆ ನಿನ್ನ ಕನಸಿಗೆ ಸೋತು
ಪದೆ ಪದೆ ನೆನಪಿಸುವ ನಿನ್ನಿರುವೆಕೆಯ ತಾಗು
ಬಯಸಿದೆ ಜೀವಂತವಾಗಿ ಹೊರ ಬಂದರೆ ಸಾಕು..
ಹೀಗೆ ಇರಬೇಕೆನ್ನುವ ಆಸೆಯಿಲ್ಲ
ಇಂದೇ ಬರಬೇಕೆನ್ನುವ ಆಜ್ಞೆ ಇಲ್ಲ
ನೀ ಹೇಗೆ ಇದ್ದರು ತಿರಸ್ಕಾರವಿರದು
ಜೀವಂತವಾಗಿ ಹೊರ ಬಂದರೆ ಸಾಕದು.
ಚುಚ್ಚು ಮಾತುಗಳು ಸಾಕಾಗಿದೆ
ಸಂತೈಸುವ ನಗುವೊಂದು ಬೇಕಾಗಿದೆ
ಸಾಕಾಗದ ಒಡನಾಟದ ಅಪ್ಪುಗೆ ಬೇಕು
ನೀ, ಜೀವಂತವಾಗಿ ಬಂದರೆ ಸಾಕು....
ಚಿತ್ರ ಕೃಪೆ: ಅಂತರ್ಜಾಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!