ಕೈಯಲ್ಲಿ ಒಂದು ಮೊಬೈಲು ಕೆಲಸವನ್ನ ಒಂದಷ್ಟು ವೇಗವಾಗಿ ಮಾಡುವುದಕ್ಕೆ ಅಂತ ಒಂದಷ್ಟು ಸಮಯದಿಂದ ಜೊತೆಗೆ ಇದೆ. ಕೆಲವೊಂದು ಸಲ ಕೆಲಸಗಳು ಬೇಗ ಆಗುತ್ತದೆ. ಇನ್ನೊಂದಷ್ಟು ಸಮಯ ಕೆಲಸಗಳೇ ಮರೆತು ಹೋಗುವಷ್ಟು ಮೊಬೈಲ್ ನನ್ನನ್ನು ಹಿಡಿದುಕೊಂಡು ಬಿಡುತ್ತದೆ. ಆದರೆ ಇತ್ತೀಚಿಗೆ ಸಣ್ಣದೊಂದು ಸಮಸ್ಯೆ ಆರಂಭವಾಗಿದೆ. ಮೊಬೈಲ್ನಲ್ಲಿ ಏನೇ ಕೆಲಸ ಮಾಡ್ತಾ ಇದ್ರು ಸಣ್ಣದೊಂದು ಜಾಹಿರಾತು ಪ್ರತಿ ನಿಮಿಷಕ್ಕೊಂದು ಸಲ ಬರ್ತಾನೆ ಇರುತ್ತದೆ.  ಯಾವುದು ವಿಚಾರಗಳನ್ನು ಓದುವಾಗ ಬೇಕಾಗಿರುವ ವಿಚಾರಗಳನ್ನ ಡೌನ್ಲೋಡ್ ಮಾಡಿಕೊಳ್ಳುವಾಗ ಒಂದಷ್ಟು ಒಪ್ಪಿಗೆಗಳನ್ನು ಕೊಟ್ಟಿರುತ್ತೇನೆ. ಅದರಲ್ಲಿ ಜಾಹೀರಾತಿದಾರರು ತಮ್ಮ ಒಪ್ಪಿಗೆಯನ್ನು ಸೇರಿಸಿಕೊಂಡು ಬಿಟ್ಟಿರುತ್ತಾರೆ. ಈಗ ನನಗೆ ಅದನ್ನ ನಿಲ್ಲಿಸುವುದಕ್ಕೆ ಎಲ್ಲಿ ಒಪ್ಪಿಗೆಯನ್ನ ನಿರಾಕರಿಸಬೇಕು ಅನ್ನುವುದು ಗೊತ್ತಾಗುತ್ತಿಲ್ಲ. ಹಾಗಾಗಿ ಮಾಡುವ ಕೆಲಸಕ್ಕೆ ವಿಪರೀತ ತೊಂದರೆ ಎದುರಾಗುತ್ತಿದೆ. ಹೀಗೆ ಅಲ್ವಾ ನಮ್ಮ ಜೀವನದಲ್ಲಿ ಕೆಲವೊಂದು ಸಲ ನಾವು ಹೇಳಿರುವ ಯಾವುದೋ ಒಂದು ಮಾತನ್ನು ಅವರು ಇನ್ನೊಂದು ರೀತಿಯಲ್ಲಿ ಅರ್ಥಿಸಿಕೊಂಡು ಅವರದೇ ಸತ್ಯವೆಂದು ನಂಬಿಕೊಂಡಿರುತ್ತಾರೆ. ನಮಗೆ ಗೊತ್ತಿಲ್ಲದೆ ಎಲ್ಲೋ ಒಂದು ಕಡೆ ನಮ್ಮ ಸಮಯವನ್ನ ವ್ಯರ್ಥ ಮಾಡುತ್ತಿರುತ್ತಾರೆ. ಅದನ್ನ ಅರ್ಥೈಸಿಕೊಂಡು ನಾವು ಸಾಗಿದಾಗ ಮಾತ್ರ ನಮ್ಮ ಗುರಿಯ ಕಡೆಗೆ ಸೇರಬಹುದು... ಕೆಲಸದ ನಡುವೆ ತೊಂದರೆ ಕೊಡುವವರು ಇದ್ದೇ ಇರುತ್ತಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ