ಬೇಕಾಗಿದೆ ಬದಲಾವಣೆ. ಅದೊಂದು ದೊಡ್ಡ ಸ್ಪರ್ಧೆ ಬೇರೆ ಬೇರೆ ಕಡೆಯಿಂದ ಹಲವು ವರ್ಷಗಳ ಪರಿಶ್ರಮಪಟ್ಟು ಆ ವೇದಿಕೆಯಲ್ಲಿ ಸ್ಪರ್ಧೆಗಾಗಿ ಆಗಮಿಸಿದ್ದಾರೆ ವಿವಿಧ ಊರುಗಳಿಂದ. ಅಲ್ಲಿ ಒಂದೇ ತರದ ಸ್ಪರ್ಧೆಗಳಲ್ಲ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದಾವೆ. ಸ್ಪರ್ಧೆ ಆಯೋಜಕರಿಗೆ ಸ್ಪರ್ಧೆಯನ್ನು ಮಾಡಿದ್ದೇವೆ ಅನ್ನುವ ಹೆಸರು ಬೇಕೇ ಹೊರತು ಬಂದ ಸ್ಪರ್ಧಿಗಳ ಪ್ರತಿಭೆಗೆ ಬೆಲೆ ಸಿಗಬೇಕು ಅನ್ನುವ ಯಾವ ಯೋಚನೆಯೂ ಅವರಲ್ಲಿಲ್ಲ. ವೇದಿಕೆಯಲ್ಲಿ ದೇಹವನ್ನು, ಸ್ವರವನ್ನು ಮನಸ್ಸನ್ನು ನೀಡಿ ಪ್ರದರ್ಶನವನ್ನು ನೀಡುತ್ತಿದ್ದಾರೆ ಸ್ಪರ್ಧಿಗಳು. ತೀರ್ಪುಗಾರನಿಗೆ ಆ ವಿಚಾರ ಒಂದಿನಿತೂ ಗೊತ್ತಿಲ್ಲ. ಯಾರೋ ಗೆಲುವನ್ನು ಸಾಧಿಸಿದರು ನಿಜದ ಪ್ರತಿಭೆಗಳೆಲ್ಲವೂ ಹಾಗೆ ಮೂಲೆಗೊರಗಿ ಹೋದವು. ಹಾಗೇ ನೋವಿನಿಂದ ಹೊರಟ ಮುಗ್ದ ಮನಸ್ಸುಗಳಲ್ಲಿ ಮೂಡಿದ ಪ್ರಶ್ನೆ ಏನಂತಂದ್ರೆ ಪ್ರತಿಭೆಗಳನ್ನು ವೇದಿಕೆಯ ಮುಂದೆ ಪ್ರದರ್ಶನಕ್ಕೆ ಇಟ್ಟಾಗ ಅದನ್ನ ತೀರ್ಪು ನೀಡುವವನು ಇವರೆಲ್ಲರಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಜ್ಞಾನ ವಿವೇಚನೆ ಮತ್ತು ಆ ವಿಚಾರದ ತಜ್ಞನಾಗಿರಬೇಕು. ಅದನ್ನು ಹೊರತುಪಡಿಸಿ ಸಂಬಂಧವೇ ಇಲ್ಲದವರನ್ನು ತಂದು ಕೂರಿಸಿ ನಮ್ಮ ಪ್ರತಿಭೆಯನ್ನ ಅಳೆಯುವ ಇವರ ಮೌಡ್ಯತೆಗೆ ಏನು ಅನ್ನೋಣ. ನಿಜ ಬದಲಾವಣೆ ಆಗಬೇಕಾಗಿದೆ, ಪ್ರತಿಭೆಗಳಿಗೆ ಬೆಳಕು ನೀಡಿ ಮುನ್ನಡೆಸುವ ದೀಪ ಹಿಡಿದ ಕೈಗಳು ಬೇಕಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!