ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ್ನ ಹುಡುಕ ಹೊರಟ್ರೆ ನನಗೆ ಮೇಲಿನಿಂದ ಬಂದದ್ದು ಎನ್ನುವ ಉತ್ತರ. ಹೀಗಿರುವಾಗ ಯಾರನ್ನ ಅಂತ ಕೇಳೋದು. ಊರಲ್ಲಿ ಎಲ್ಲಾ ಕಡೆಗೂ ಮಾತನಾಡುವುದಕ್ಕೆ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಜನ ಕಾಡಿ ಬೇಡಿದ್ದಕ್ಕೆ ಇನ್ನೊಂದು ಕಡೆ ಹೊಸ ಟವರ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿತು ಅನ್ನುವ ಸುದ್ದಿ ತಲುಪಿತು. ಆದರೆ ಅಲ್ಲಿಯ ಸುತ್ತಮುತ್ತಲಿನವರ ಯಾರ ಅನುಮತಿಯನ್ನು ಕೇಳುವವರಿಲ್ಲ. ಅದರಿಂದ ಆಗುವ ಹಾನಿಯ ಬಗ್ಗೆ ಯೋಚನೆಯೂ ಇಲ್ಲ. ಕೆಲಸವೂ ಸಾಗಿದೆ. ಇದರಿಂದ ಸಮಸ್ಯೆ ಪರಿಹಾರ ಆಗುತ್ತೆ ಎನ್ನುವ ಉತ್ತರ ಮೇಲಿನಿಂದ ಬಂತು. ಆದರೆ ಅದು ಸಾಧ್ಯವಾಗುತ್ತೋ ಇಲ್ಲೋ ಅನ್ನೋದು ಕಾಲವೇ ಉತ್ತರಿಸಬೇಕಷ್ಟೆ. ಅದರಿಂದ ಮುಂದೆ ಆಗಬಹುದಾದ ಸಮಸ್ಯೆಗಳನ್ನ ಅನುಭವಿಸಬೇಕಾದವರು ಅದರ ಸುತ್ತಮುತ್ತ ಇನ್ನೊ ಬದುಕಿದ್ದಾರೆ. ದೊಡ್ಡವರು ತಿಳಿದವರು ಎಷ್ಟೇ ಸಮಸ್ಯೆಗಳ ಬಗ್ಗೆ ವಿವರಿಸಿದರೂ ಸಹ ಯಾರು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬೆಂಕಿ ಬಿದ್ದಾಗಲೇ ಬಾವಿ ತೋಡುವ ಮಂದಿ ಊರ ತುಂಬ ತುಂಬಿಕೊಂಡಾಗ ಈಗ ನೀರು ಯಾರಿಗೂ ಅವಶ್ಯಕತೆ ಇಲ್ಲ. ಪರಿಸ್ಥಿತಿ ಬದಲಾಗಬೇಕಾದರೆ ಸಮಸ್ಯೆ ಹುಡುಕಿ ಬರಬೇಕಷ್ಟೆ. ಇದಕ್ಕೆ ಕಾರಣ ಯಾರು? ನಾವೋ ಅಥವಾ ಅವರೋ? ನಿಮ್ಮ ಉತ್ತರ ಬೇಕಾಗಿದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!