ವೇಣುಗೋಪಾಲ ನಾಯ್ಕ ಅವರ "ಇಂಜಿನೀಯರ ದರ್ಪಣ".

ಅಸೋಸಿಯೇಶನ್ ಆಫ್ ಸ್ಮಾಲ್ ಆ್ಯಂಡ್ ಮೀಡಿಯಂ ನ್ಯೂಸ್ ಮೇಪರ್ಸ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾಗಿದ್ದ ವೇಣುಗೋಪಾಲ ಕೆ. ನಾಯ್ಕ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿದ್ದ ಮಾಸಪತ್ರಿಕೆ " ಇಂಜಿನೀಯರರ ದರ್ಪಣ".

2012ರಲ್ಲಿ ಆರಂಭವಾದ ಈ ಪತ್ರಿಕೆ ಒಂದು ದಶಕದ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಟ್ಯಾಬ್ಲಾಯ್ಡ್ ರೂಪದಲ್ಲಿ 12 ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿಗಳಾಗಿತ್ತು. ಹುಬ್ಬಳ್ಳಿ ಶ್ರೀನಗರದ ಧರ್ಮಪುರಿ ಬಡಾವಣೆಯಲ್ಲಿ ಪತ್ರಿಕಾ ಕಚೇರಿ ಹೊಂದಿದ್ದ "ಇಂಜಿನೀಯರರ ದರ್ಒಣ"ವು ಪೊಲೀಸ್ ಟೈಮ್ಸ್ ಪ್ರಿಂಟರ್ಸ್ ಆ್ಯಂಡ್ ಪಬ್ಲುಷರ್ಸ್ ನಲ್ಲಿ ಮುದ್ರಣವಾಗುತ್ತಿತ್ತು.

-ಶ್ರೀರಾಮ ದಿವಾಣ