ಮುಂಬಯಿ ಬಿಲ್ಲವರ ಎಸೋಸಿಯೇಶನ್ ನ "ಅಕ್ಷಯ"
ಮುಂಬಯಿ ಸಾಂತಾಕ್ರೂಝ್ (ಈಸ್ಟ್) ಆನಂದ ನಗರದ ಗುರು ನಾರಾಯಣ ಮಾರ್ಗದಲ್ಲಿರುವ ಬಿಲ್ಲವರ ಭವನದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬಿಲ್ಲವರ ಎಸೋಸಿಯೇಶನ್ ಕಳೆದ ಮೂವತ್ತೇಳು ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಅಕ್ಷಯ".
ಬಿಲ್ಲವರ ಎಸೋಸಿಯೇಶನ್ ಪರವಾಗಿ ಪ್ರಸ್ತುತ ಧರ್ಮೇಶ್ ಸೂರಪ್ಪ ಸಾಲ್ಯಾನ್ ಅವರು ಪತ್ರಿಕೆಯ ಪ್ರಕಾಶಕರು ಮತ್ತು ನಿರ್ವಾಹಕ ಸಂಪಾದಕರಾಗಿದ್ದಾರೆ. ಡಾ | ಈಶ್ವರ ಅಲೆವೂರು (ಈಶ್ವರ ಕೆ. ಪೂಜಾರಿ) ಮುಖ್ಯ ಸಂಪಾದಕರು. ಹರೀಶ್ ಹೆಜ್ಮಾಡಿ ಸಂಪಾದಕರು. ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ ವ್ಯವಸ್ಥಾಪಕ ಸಂಪಾದಕರು. ಕೇಶವ ಕೆ. ಕೋಟ್ಯಾನ್ ಉಪ ಸಂಪಾದಕರು.
ಹಿರಿಯ ಸಾಹಿತಿಗಳಾದ ಎಂ. ಬಿ. ಕುಕ್ಯಾನ್, ಬನ್ನಂಜೆ ಬಾಬು ಅಮೀನ್ ಮೊದಲಾದವರು ಹಿಂದೆ ಅಕ್ಷಯದ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಎಸ್. ಕೆ. ಸುಂದರ್, ಜಯರಾಮ ಜಿ. ನಾಯಕ್, ಕುಸುಮಚಂದ್ರ ಅಮೀನ್ ಹಾಗೂ ಪ್ರಭಾಕರ ಬೆಳುವಾಯಿ "ಅಕ್ಷಯ"ದ ಪ್ರತಿನಿಧಿಗಳು. ಸತೀಶ್ ಎನ್. ಬಂಗೇರ ಜಾಹೀರಾತು ನಿರ್ವಾಹಕರು. ಮಮತಾ ನಾಯಕ್ ಕಂಪ್ಯೂಟರ್ ಮತ್ತು ಕಚೇರಿ ನಿರ್ವಾಹಕರಾಗಿದ್ದಾರೆ.
ಮುಂಬಯಿಯ ಮಾಟುಂಗ ಶಾಲೊಮಾರ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ದೀಪಕ್ ನಾರಾಯಣ ಶೆಟ್ಟಿಯವರ ಸರಿತ ಆರ್ಟ್ ಪ್ರಿಂಟರ್ಸ್ ನಲ್ಲಿ ಮುದ್ರಣಗೊಳುವ "ಅಕ್ಷಯ"ವು ೪೦ ಪುಟಗಳನ್ನು ಹೊಂದಿದ್ದು, ಪುಸ್ತಕ ರೂಪದಲ್ಲಿ ಬರುತ್ತಿದೆ. ಅಕ್ಷಯದ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿ. ಸಾಹಿತ್ಯ, ಸಂಸ್ಕೃತಿ, ಕಲೆ, ಸಮಾಜ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ವೈವಿಧ್ಯಮಯ ಬರೆಹಗಳು, ಬಿಲ್ಲವರ ಎಸೋಸೊಯೇಶನ್ ಮತ್ತು ಎಸೋಸಿಯೇಶನ್ ನಡೆಸುವ ವಿವಿಧ ಸಂಸ್ಥೆಗಳ ಕಾರ್ಯಕ್ರಮಗಳ ವರದಿಗಳು, ಸಮುದಾಯದ ಜನರಿಗೆ ಬಂಧಿಸಿದ ಎಲ್ಲಾ ರೀತಿಯ ಸುದ್ದಿಗಳೂ "ಅಕ್ಷಯ" ದಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!