ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ "ಕಚ್ಚೂರುವಾಣಿ"
ಬಾರ್ಕೂರಿನಲ್ಲಿರುವ ಭಂಡಾರಿ ಸಮಾಜದವರ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ (ರಿ) ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಕಚ್ಚೂರುವಾಣಿ". ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ " ಕಚ್ಚೂರುವಾಣಿ"ಯ ಮುದ್ರಕರು ಮತ್ತು ಪ್ರಕಾಶಕರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರೂ, ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಲಕ್ಷ್ಮಣ್ ಕರಾವಳಿ. (ಆರಂಭದಲ್ಲಿ ಶ್ರೀಧರ ಭಂಡಾರಿ ಬಿರ್ತಿ ಪ್ರಕಾಶಕರು ಮತ್ತು ಮುದ್ರಕರಾಗಿದ್ದರು). ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಭಂಡಾರಿ ಪಾಂಗಾಳ ಪ್ರಧಾನ ಸಂಪಾದಕರು. ಕಿಶೋರ್ ಕುಮಾರ್ ಸೊರ್ನಾಡ್ ಉಪಸಂಪಾದಕರು.
ಭಂಡಾರಿ ಸಮಾಜ ಸಂಘ (ರಿ)ದ ಮಾಜಿ ಅಧ್ಯಕ್ಷರಾದ ರಘುವೀರ ಭಂಡಾರಿ ಪ್ರಸರಣ ವಿಭಾಗದ ವ್ಯವಸ್ಥಾಪಕರಾಗಿದ್ದಾರೆ. ಸಂಘದ ಮುಂಬಯಿ, ಬೆಂಗಳೂರು, ಮಂಗಳೂರು, ಕಾರ್ಕಳ ಮತ್ತು ಉಡುಪಿ ಘಟಕಗಳ ಅಧ್ಯಕ್ದರು, ಮಂಗಳೂರಿನಲ್ಲಿರುವ ಕಚ್ಚೂರು ಸೊಸೈಟಿಯ ಸಿಇಒ ಹಾಗೂ ಕಿಶೋರ್ ಸೊರ್ನಾಡ್ ಸಂಪಾದಕ ಮಂಡಳಿ ಸದಸ್ಯರು.
ಭಂಡಾರಿ ಮಹಾಮಂಡಲ (ರಿ)ದ ಅಧ್ಯಕ್ಷರಾದ ಅಮಿತಾ ಗಿರೀಶ್ ಭಂಡಾರಿಯವರ ಸಹಯೋಗದಲ್ಲಿ ಹೊರಬರುತ್ತಿರುವ "ಕಚ್ಚೂರುವಾಣಿ" ೩೨ ಪುಟಗಳನ್ನು ಹೊಂದಿದ್ದು, ಪುಸ್ತಕ ರೂಪದಲ್ಲಿದೆ. ಮಂಗಳೂರು ಬಂದರಿನ ಕರಾವಳಿ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಕಚ್ಚೂರುವಾಣಿಯ ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿ. ಮೂರು ವರಗಷದ ವಾರ್ಷಿಕ ಚಂದಾ ೬೦೦ ರೂಪಾಯಿಗಳು. ಆಜೀವ ಸದಸ್ಯತ್ವ (೧೨ ವರ್ಷಕ್ಕೆ) ೨೦೦೦ ರೂಪಾಯಿಗಳು. ಪ್ರೋತ್ಸಾಹಕರಾಗಲು ೫೦೦೦ ರೂ. ಮತ್ತು ಪೋಷಕರಾಗಲು ೧೦ ಸಾವಿರ ರೂಪಾಯಿಗಳು.
"ಕಚ್ಚೂರುವಾಣಿ" ಯಲ್ಲಿ ನಾಗೇಶ್ವರ ದೇವಸ್ಥಾನ, ಸೇವಾ ಟ್ರಸ್ಟ್, ಭಂಡಾರಿ ಸಮಾಜ ಸೇವಾ ಸಂಘ ಮತ್ತು ಮಹಾಮಂಡಲದ ಕಾರ್ಯಕ್ರಮಗಳ ವರದಿಗಳು ಮತ್ತು ಯೋಜನೆಗಳ ವಿವರಗಳು, ಸಂಪಾದಕೀಯ ಸಹಿತ ಲೇಖಕರ ಸಣ್ಣ ಪುಟ್ಟ ಸದಭಿರುಚಿಯ ಚಿಂತನಾತ್ಮಕ, ವ್ಯಕ್ತಿತ್ವ ವಿಕಸನ ಹಾಗೂ ಧಾರ್ಮಿಕ ಸಂಬಂಧಿ ಬರೆಹಗಳು ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!