ಮಂಗಳೂರು 'ಯುವವಾಹಿನಿ ಕೇಂದ್ರ ಸಮಿತಿ'ಯ "ಯುವ ಸಿಂಚನ"

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಮಂಗಳೂರಿನ ಯುವವಾಹಿನಿ (ರಿ) ಕೇಂದ್ರ ಸಮಿತಿಯು ಕಳೆದ ಹನ್ನೊಂದು ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಮಾಸಪತ್ರಿಕೆಯಾಗಿದೆ "ಯುವ ಸಿಂಚನ". "ಯುವ ಸಿಂಚನ"ದ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರು ದಿನಕರ ಡಿ. ಬಂಗೇರ ಅವರು.

ಯುವವಾಹಿನಿ ಕೇಂದ್ರ ಸಮಿತಿ ವರ್ಷಕ್ಕೊಮ್ಮೆ ಬದಲಾಗುವಾಗ, " ಯುವ ಸಿಂಚನ"ದ ಗೌರವ ಸಂಪಾದಕರು, ಕಾರ್ಯನಿರ್ವಾಹಕ ಸಂಪಾದಕರು ಮತ್ತು ಉಪಸಂಪಾದಕರು ಬದಲಾಗುತ್ತಾರೆ.

ಪ್ರಸ್ತುತ ೨೦೨೬ರಲ್ಲಿ ಅಶೋಕ್ ಕುಮಾರ್ ಪಡ್ಪು ಗೌರವ ಸಂಪಾದಕರು. ಹರೀಶ್ ವಿ. ಪಚ್ಚನಾಡಿ ಕಾರ್ಯನಿರ್ವಾಹಕ ಸಂಪಾದಕರು. ರಾಜೇಶ್ ಸುವರ್ಣ ಬಂಟ್ವಾಳ ಉಪ ಸಂಪಾದಕರು. ಚೈತ್ರಾ ಕಬ್ಬಿನಾಲೆ ಪತ್ರಿಕಾ ಕಾರ್ಯದರ್ಶಿ. ಲತೀಶ್ ಎಂ. ಸಂಕೊಳಿಗೆ, ಉಷಾ ಹಾಗೂ ಶಿವಪ್ರಸಾದ್ ನೂಚಿಲ ಸದಸ್ಯರು.

ಈ ಹಿಂದೆ ೨೦೧೪ರಲ್ಲಿ ರವಿಚಂದ್ರ , ೨೦೧೫ರಲ್ಲಿ ಪ್ರೇಮನಾಥ ಕೆ., ೨೦೧೬ರಲ್ಲಿ ಸಂತೋಷ್ ಕುಮಾರ್ ಉಡುಪಿ, ೨೦೧೭ರಲ್ಲಿ ಪದ್ಮನಾಭ ಮರೋಳಿ, ೨೦೧೮ರಲ್ಲಿ ಯಶವಂತ ಪೂಜಾರಿ, ೨೦೧೯ರಲ್ಲಿ ಜಯಂತ್ ನಡುಬೈಲ್ ಪುತ್ತೂರು, ೨೦೨೦ರಲ್ಲಿ ನರೇಶ್ ಕುಮಾರ್ ಸಸಿಹಿತ್ಲು, ೨೦೨೧ರಲ್ಲಿ ಡಾ. ರಾಜಾರಾಮ್ ಕೆ.ಬಿ., ೨೦೨೨ರಲ್ಲಿ ಉದಯ ಅಮೀನ್ ಮಟ್ಟು, ೨೦೨೩ರಲ್ಲಿ ರಾಜೇಶ್ ಬಿ., ೨೦೨೪ರಲ್ಲಿ ಹರೀಶ್ ಕೆ. ಪೂಜಾರಿ ಹಾಗೂ ೨೦೨೫ರಲ್ಲಿ ಲೋಕೇಶ್ ಕೋಟ್ಯಾನ್ ಗೌರವ ಸಂಪಾದಕರಾಗಿದ್ದರು.

ಕಾರ್ಯನಿರ್ವಾಹಕ ಸಂಪಾದಕರಾಗಿ ೨೦೧೮ರಲ್ಲಿ ಶುಭ ರಾಜೇಂದ್ರ, ೨೦೧೯ರಲ್ಲಿ ರಾಜೇಶ್ ಸುವರ್ಣ, ೨೦೨೦ರಲ್ಲಿ ಸಂಜೀವ ಸುವರ್ಣ, ೨೦೨೧ರಲ್ಲಿ ದೇವರಾಜ ಅಮೀನ್ ಬಜಪೆ, ೨೦೨೨ರಲ್ಲಿ ಭಾಸ್ಕರ ಕೋಟ್ಯಾನ್, ೨೦೨೩ರಲ್ಲಿ ಜಗದೀಶಚಂದ್ರ ಡಿ.ಕೆ., ೨೦೨೩ರಲ್ಲಿ ಜಗದೀಶಚಂದ್ರ ಡಿ.ಕೆ, ೨೦೨೪ರಲ್ಲಿ ಸತೀಶ್ ಕಿಲ್ಪಾಡಿ ಹಾಗೂ ೨೦೨೫ರಲ್ಲಿ ಕುಸುಮಾಕರ ಕುಂಪಲ ಇದ್ದರು.

ಉಪಸಂಪಾದಕರಾಗಿ ೨೦೧೪ರಲ್ಲಿ ಸಂಜೀವ ಸುವರ್ಣ, ೨೦೧೫ರಲ್ಲಿ ಹರೀಶ್ ಕೋಟ್ಯಾನ್ ಬಂಟ್ವಾಳ, ೨೦೧೬ ಮತ್ತು ೨೦೧೭ರಲ್ಲಿ ಗಂಗಾಧರ ಪೂಜಾರಿ ಸುರತ್ಕಲ್, ೨೦೧೮ರಲ್ಲಿ ರಾಜೇಶ್ ಸುವರ್ಣ ಬಂಟ್ವಾಳ, ೨೦೧೯ರಲ್ಲಿ ಹರೀಶ್ ಪಚ್ಚನಾಡಿ, ೨೦೨೦ರಲ್ಲಿ ಸುಜಿತ್ ಪಡುಬಿದ್ರಿ, ೨೦೨೧ರಲ್ಲಿ ರಾಜೇಶ್ ಡಿ. ಕೋಟ್ಯಾನ್, ೨೦೨೨ರಲ್ಲಿ ಅಶೋಕ್ ಕುಮಾರ್ ಪಡ್ಪು, ೨೦೨೩ರಲ್ಲಿ ಕಿಶನ್ ಕುಮಾರ್, ೨೦೨೪ರಲ್ಲಿ ನವಾನಂದ ಮೂಡಬಿದ್ರಿ ಹಾಗೂ ೨೦೨೫ರಲ್ಲಿ ಉದಯ ಕೊಲಾಡಿ ಇದ್ದರು.

ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಹಾನಾ ಪಬ್ಲಿಷರ್ಸ್ ನಲ್ಲಿ ಪತ್ರಿಕೆಯ ಅಕ್ಷರ ಜೋಡಣೆಯ ಕೆಲಸ ನಡೆಯುತ್ತದೆ. ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಣಗೊಳ್ಳುತ್ತದೆ. ೬೮ ಪುಟಗಳಲ್ಲಿ ಪುಸ್ತಕ ರೂಪದಲ್ಲಿ (ಸುಧಾ ಮಾದರಿಯಲ್ಲಿ) ಬರುತ್ತಿರುವ " ಯುವ ಸಿಂಚನ"ದ ಬಿಡಿ ಸಂಚಿಕೆಯ ಬೆಲೆ ೧೦ ರೂಪಾಯಿ. ವಾರ್ಷಿಕ ಚಂದಾ ೧೫೦ ರೂಪಾಯಿ.

ಯುವವಾಹಿನಿ ಕೇಂದ್ರ ಸಮಿತಿ ಮತ್ತು ರಾಜ್ಯಾದ್ಯಂತ ವಿವಿಧೆಡೆಗಳಲ್ಲಿರುವ ಘಟಕಗಳು ನಡೆಸುವ ವಿವಿಧ ರೀತಿಯ ಕಾರ್ಯಕ್ರಮಗಳ ವರದಿಗಳು ಮತ್ತು ಕನ್ನಡ ಮತ್ತು ತುಳು ಭಾಷೆಯಲ್ಲಿ ಸಂಸ್ಥೆಯ ಸದಸ್ಯರು ಬರೆಯುವ ಲೇಖನ, ಕವನ, ಕಥೆ, ಇತ್ಯಾದಿಗಳು ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ