ಮೊಹಮ್ಮದ್ ರಫಿ ಹಾಡಿರುವ 'ಖುದಾ ಭೀ ಆಸಮಾಂಸೆ ಜಬ ಜಮೀನ್ ಪರ ' ಈ ಹಾಡಿನ ಪೂರ್ತಿ ಅನುವಾದ ನಾನು ಮಾಡಿದ್ದು ಇಲ್ಲಿ ಇದೆ. (ನನ್ನ ಸಂಖ್ಯೆ 305)
ದೇವನು ಸ್ವರ್ಗದಿಂದ ಭೂಮಿಯ ಕಡೆಗೆ ನೋಡಿದಾಗ ನನ್ನ ನಲ್ಲೆಯ ನೋಡಿ ಯಾರು ಇವಳನು ಸೃಷ್ಟಿಸಿದರು ಎನ್ನುವ ||
ಚಿತ್ರಕಾರ ಯೋಚಿಸುವ ಈ ಚಿತ್ರವನು ಯಾರು ಬರೆದರು ? ಯಾರಿಗೆ ಒಲಿವೆ ನೀನು ಚೆಲುವೆ ? ಆ ಭಾಗ್ಯ ಯಾರದು ? ಒಮ್ಮೆ ಅಸೂಯೆ ಪಟ್ಟಾನು, ಒಮ್ಮೆ ಸಂತಸವ ||
ಲೋಕದ ಎಲ್ಲ ಮಾದಕತೆ ಕಣ್ಣಲೇ ತುಂಬಿದೆ ಏನು ? ಎಷ್ಟು ಚೈತ್ರ ಮುಸುಕಿದವು ನಿನ್ನ ದೇಹವನು ? ನಿನ್ನ ಮೊದಲು ಯಾರೂ ಇಲ್ಲ, ನಿನ್ನ ನಂತರವೂ ಇಲ್ಲ ||
ಸ್ವರ್ಗದಿಂದ ಬಂದ ಜನರು ಇಲ್ಲಿ ಅಲೆದಾರು ಎಲ್ಲಿಡುವೆ ನಿನ್ನ ಪಾದವನು ಅದನ್ನು ಮುದ್ದಿಸಿಯಾರು ಯಾರ ಹೃದಯದಿ ಏನಾಗುವುದೋ ಅವರೇ ತಾವು ಬಲ್ಲರು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!