ಕಣ್ಣು ಬೇಡವೆಂದರೂ ಕಣ್ಣೀರನ್ನ ಇಳಿಸುತ್ತಿದೆ. ಜೀವನದಲ್ಲಿ ಕಾಡುವಂತ ನೋವೇನಲ್ಲ, ಯಾರನ್ನೂ ಕಳೆದುಕೊಂಡಿಲ್ಲ ಆದರೂ ಕಣ್ಣೀರು ಇಳಿಯುತ್ತಿದೆ. ಆಗಿರೋದು ಇಷ್ಟೇ, ಜೀವನ ಸಂಗಾತಿಯನ್ನ ಎರಡು ದಿನ ತೊರೆದು ದೂರದೂರಿಗೆ ಹೊರಡಬೇಕು. ಒಂದು ದಿನವೂ ಬಿಟ್ಟಿದ್ದವರಲ್ಲ ಆದರೆ ಇಂದು ಆ ಸಣ್ಣ ಅಗಲುವಿಕೆ ಅನಿವಾರ್ಯವಾಗಿದೆ. ಕಾರ್ಯನಿಮಿತ್ತ ಹೊರಟು ನಿಂತಾಗ ಒಬ್ಬರಿಗೊಬ್ಬರು ಬಿಟ್ಟಿರೋದರ ಕಷ್ಟ ಅರಿವಾಯಿತು. ಇಷ್ಟು ದಿನದವರೆಗೆ ಜೊತೆಗೆ ನಿಂತವರು ಕೆಲವು ದಿನಗಳ ಅಗಲುವಿಕೆ ಇಷ್ಟೊಂದು ಘಾಸಿ ಮಾಡುತ್ತೆ ಅಂತ ಅಂದುಕೊಂಡಿರಲಿಲ್ಲ. ನಿಷ್ಕಲ್ಮಷ ಪ್ರೀತಿ ಇದ್ದಾಗ ಮಾತ್ರ ಸಣ್ಣ ಅಲ್ಪವಿರಾಮವೂ ತುಂಬಾ ನೋವು ನೀಡುತ್ತದೆ... ಹಾಗೇ ಕಣ್ಣೀರಿಳಿಸುತ್ತಾ ನಿಂತವನಿಗೆ ಅವತ್ತು ಅರ್ಥವಾಗಿತ್ತು ಅವಳು ಅವನ ಜೀವನದೊಳಗೆ ಎಷ್ಟು ತುಂಬಿಕೊಂಡಿದ್ದಾಳೆ ಅಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!