ನಾಳೆ ರಾಯ ನಿನ್ನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಯುತ್ತಿರುತ್ತಾನೆ. ಪಾಪ ಆತನಿಗೆ ನಿನ್ನ ಉದ್ಧಾರದ ಅವಶ್ಯಕತೆ ಇಲ್ಲ.  ಆತನ ಆಸೆ ಒಂದೇ ನೀನು ಇಂದು ಮಾಡುವ ಎಲ್ಲವನ್ನ ಅವನ ಜೊತೆಗೆ ಅವನ ಮಡಿಲಿಗೆ ಹಾಕಬೇಕು. ಅವನಿಂದಲೇ ಎಲ್ಲವೂ ಸಾಧ್ಯ. ನಾಳೆ ರಾಯನನ್ನೇ ನಂಬಿ ಬದುಕಬೇಕು. ಕನಸುಗಳನ್ನು ಆಸೆಗಳನ್ನ ಕೆಲಸಗಳನ್ನ ಇಷ್ಟಗಳನ್ನ ಎಲ್ಲವನ್ನು ಅವನಿಗೆ ಉಸ್ತುವಾರಿ ವಹಿಸಿಕೊಡಬೇಕು. ದಿನದ ಪ್ರತಿಕ್ಷಣವೂ ಅವನನ್ನೇ ಆರಾಧಿಸಿ ಬದುಕಬೇಕು. ಅವನು ಜೊತೆಗೆ ಹೆಜ್ಜೆ ಇಡುತ್ತಿದ್ದ. ಆತ ನಿನ್ನನ್ನ ಪಾತಾಳಕ್ಕೆ ತಳ್ಳಿ ನಿನ್ನ ಬದುಕಿಗೆ ಅರ್ಥವಿಲ್ಲದ ಹಾಗೆ ಮಾಡಿಬಿಡುತ್ತಾನೆ. ಆಗ ಸಂತೋಷಕನಾಗಿ ಜೀವಿಸ್ತಾನೆ. ಅವನು ಕಾಯುತ್ತಿದ್ದಾನೆ ನಿನ್ನ ಸೋಲಿಗೆ ನಿನ್ನ ಆಳುವಿಗೆ ನಿನ್ನ ನೋವಿಗೆ ನೀನವನ ದಾಸನಾದರೆ ನಿನ್ನ ಬದುಕು ನಾಶವಾದಂತೆ. ಹಾಗಾಗಿ ಸುತ್ತಮುತ್ತ ನೋಡಿಕೊಂಡು ಇಂದಿನ ರಾಜನೊಂದಿಗೆ ಬದುಕು, ನಾಳೆಯ ರಾಜನೊಂದಿಗೆ ಬೇಡ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ