ಆ ಶಾಲೆಯ ಮಕ್ಕಳ ಹಣಕಾಸಿನ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ, ಯಾವುದರ ಖರೀದಿಗೂ ಸಾದ್ಯವಾಗದ ಸ್ಥಿತಿ. ಆ ದಿನ ಅವರಿಗೆ ಬ್ಯಾಗ್, ಪುಸ್ತಕ, ಛತ್ರಿ ಎಲ್ಲವೂ ಉಚಿತವಾಗಿ ಸಿಕ್ಕಿತು. ಮಕ್ಕಳ ಮೊಗದಲ್ಲಿ ಒಂದಷ್ಟು ನಗು. ಆ ನಗುವಿನಲ್ಲಿ ಅಶೋಕ ತನ್ನ ತಂಗಿಯನ್ನ ನೆನಪಿಸಿಕೊಂಡ. ಒಡ ಹುಟ್ಟಿದವಳು ಕಣ್ಣ ಮುಂದೆಯೇ ಕೊಲೆಯಾಗಿದ್ದಳು. ಊರಿನಲ್ಲಿ ಅಂಗಳದ ಮುಂದಿನ ಜಾಗದ ವಿಚಾರವಾಗಿ ಕುಟುಂಬದ ನಡುವಿನ ಕಲಹದಲ್ಲಿ ತಂದೆ ಪರಿಚಯವಿಲ್ಲದ ವಾಹನದಿಂದ ಅಫಘಾತ ಹೊಂದಿದ್ದರು. ತಾಯಿ ಮತ್ತು ತಂಗಿಯನ್ನ ಉಸಿರು ಕಟ್ಟಿಸಿ ಬದುಕಿನಿಂದ ದೂರಗೊಳಿಸಿದ್ದರು. ಬದುಕಿನ ಬಗ್ಗೆ ಅಶೋಕನಿಗೆ ಆಸೆಯೇ ಮಾಯವಾಯಿತು. ಜೊತೆಗೆ ಊಟ ತಿಂದವರು, ನಾವಿದ್ದೇವೆ ಅಂದರೂ ರಾಕ್ಷಸರಾಗಿದ್ದಾರೆ. ಊರು ಬಿಟ್ಟವ ಪರವೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾನೆ. ಆಗಾಗ ತನ್ನವರ ನೆನಪು ಉಳಿಸಿಕೊಳ್ಳುವುದ್ದಕ್ಕೆ ಆಗಾಗ ತನ್ನ ಉಳಿಸಿವಿಕೆಯಲ್ಲಿ ಸಹಾಯ ಮಾಡ್ತಾನೆ. ಎಷ್ಟಾದರೂ ಕಳೆದುಕೊಂಡದ್ದು ಮರಳಿ ದೊರೆಯುವುದಿಲ್ಲವೆಂದೂ ಅರಿವಿದ್ದರೂ ಆಸೆಯಲ್ಲಿ ಬದುಕುತ್ತಿದ್ದಾನೆ... ನಿರಂತರವಾಗಿ ಸಾಗಿದೆ ಹುಡುಕಾಟ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!