ಜಾತಿ ವ್ಯವಸ್ಥೆಯ ನಿರಾಕರಿಸಿ

ನನ್ನ ಕುಲ ಹೆಚ್ಚು

ನಿನ್ನ ಕುಲ ಕಡಿಮೆ

ಎಂದು ಹೊಡೆದಾಡುವ

ಕುನ್ನಿಗಳ ಬಡಿ ಎಂದ  ೧

 

ಸಮಾಜದ ಶೋಷಿತರಿಗೆ

ನೀತಿಯ ಶಾಸ್ಸ್ತ್ರಕ್ಕಿಂತ

ಸರ್ವರಿಗೆ ಹೇಸಿಕೆಯಿಲ್ಲದ

ನಡೆ ನುಡಿಯೇ ಮುಖ್ಯ ಎಂದ  ೨

 

ಸಮಾಜದ

ಜನ ಮೆಚ್ಚಿ ನಡೆಯುವುದಕ್ಕೆ

ಆಗುವುದೇ ?

ಎಡದ ಪಾದ ಕಿರು ಗುಣಿಯಲ್ಲಿ

ಮನೆ ಮಾಡು ಎಂದಾತ  ೩

 

ಕೇಳಿರಯ್ಯಾ ಮಾನವರೇ

ಎಂದು ಇಡೀ

ಸಮಾಜದ ಬಣ್ಣ

ಬಯಲು ಮಾಡಿದ

ನಿಜ ಶರಣನು  ೪



ಬ್ರಹ್ಮಾ ,ಪರ ಬ್ರಹ್ಮನ

ಕುರಿತು ತತ್ವೋಪದೇಶ

ಮಾಡುವ ಡಾಂಬಿಕರಿಗೆ

ನೇಮ -ಶೀಲ- ಭಾಷೆ

ಈ ಮೂವರಿಗೂ ಗುರುವಿಲ್ಲ ಲಿಂಗವಿಲ್ಲವೆಂದರು  ೫

 

ಶರಣನೆಂದರೆ

ಕಾವಿ ನೀರು ಕೂಳು

ಪ್ರಸಾದವ ಬಿಟ್ಟು ಬಂದ

ವನೆಂದು ಲೋಕಕ್ಕೆ ಸಾರಿದ  ೬

 

ಕಷ್ಟ ಜೀವನವಲ್ಲ

ಸಟೆ ಬಿಟ್ಟು ದಿಟವ ಹಿಡಿದು

ಶಿವಭಕ್ತಿಯ ನಲಿಸಿ ನಡೆ

ಎಂದು ಉಸುರಿದನಂಬಿಗನು  ೭

 

ಬೇರೆಯವರ ಮಾತ ಕೇಳಿ

ಹಾಳಾಗಬೇಡಿ ಎಂದು ಸಾರಿದ  ೮

 

ಜನನ ಮರಣ ಸೂತಕ ಬೆಂದವರಿಗೆ

ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ

ಮಾಡದೆ ಇಟ್ಟ ಭೋಜನ  ಪದಾರ್ಥ

ವಲ್ಲ, ಲಿಂಗಕ್ಕೆ ಲೇಸಾಗಲಿ ಎಂದು

ತಿನ್ನುವನು,ಅವನೇ ನಿಜವಾದ

ಶುದ್ಧ ಹೊಲೆಯನೆಂದು ಸಾರಿದ  ೯

 

ಎಂಜಲು ಎಂಜಲೆಂದು ಜರಿಯುವ

ಲೋಕಕ್ಕೆ, ನೀರು ಜಲಚರದ

ಎಂಜಲು, ಹಲವರೆಂಜಲ

ಮುಳುಗಿ ಉಂಡರೆಂದು  ೧೦



ಅಂಬಿಗ ಅಂಬಿಗ

ಎಂದೆನ್ನ ಹೀಯಾಳಿಸದೆ

ನಂಬಿದ್ರೆ ಒಂದೇ

ಹುಟ್ಟಲಿ ಕಡೆಯ

ಹಾಯಿಸುವನೆಂದ ಅಂಬಿಗನು  ೧೧

 

ಜಗತ್ತಿನ ಮನುಜರಿಗೆ ಹಲಹಲವು

ಬಗೆ ಪರಿ ರೀತಿಯಾಗಿ ತನ್ನ

ವಚನಗಳಿಂದ ಉಣಬಡಿಸಿದ

ವಚನಕಾರರಿಗೆ ಶರಣು ಶರಣಾರ್ಥಿ  ೧೨