ನಾಳೆ ನಾಳೆ ಎನ್ನುವುದೊಂದು
ಜನರಿಗಿರುವ ವ್ಯಾಧಿ
ನಾಳೆ ಎಂಬ ಮಣ್ಣಿನಲ್ಲಿ
ಸಿಗದು ಕೊಂಚ ಗೋಧಿ..
ಏನು ಎತ್ತ ಎಲ್ಲಿಯೆಂದು
ಶಂಕೆ ಪಡುವ ಮಂದಿ
ಬಣ್ಣ ಬಳಿದ ಭಾವದಲ್ಲೇ
ಬದುಕು ಹರಿದು ಚಿಂದಿ..
ಕಲಿಯುಗದ ದಿನಗಳಲ್ಲಿ
ಸ್ವಾರ್ಥವೆಂಬ ಸಂತೆ
ಓಡಿ ಓಡಿ ದಣಿವಾದರೂ
ನಾಳೆಯೆಂಬ ಚಿಂತೆ..
ಪ್ರೀತಿ ಪ್ರೇಮ ಪ್ರಣಯವೆಲ್ಲ
ಜೇಬಿನೊಳಗೆ ಬಂಧಿ
ಹುಡುಕಬೇಕು ಮನಸಿನಲ್ಲೂ
ಬೀದಿ ಸಂಧಿ ಗೊಂದಿ..
ಸ್ವಾಭಿಮಾನ ಆತ್ಮಸಾಕ್ಷಿ
ಇರುವುದೊಂದು ಬೆಳಕ
ಕಿಮ್ಮತ್ತಿನ ಪರಿಧಿಯಲ್ಲಿ
ನಡೆಸು ನಿಜದ ಜಳಕ..
-ಶಮೀರ್ ನಂದಿಬೆಟ್ಟ.. (ಸನಂ.)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!