ನಂಬಿಕೆಯು ಸಂಕಲನವಾಗಿ
ಜವಾಬ್ದಾರಿಗಳು ಭಾಗಕಾರವಾಗಿ ಮುನಿಸೆಲ್ಲವೂ ವ್ಯವಕಲನವಾಗಿ
ನಮ್ಮೊಲುಮೆ ಗುಣಾಕಾರವಾದರೆ..
ವಿಶ್ವಾಸದ ಸೂತ್ರದಿ ಸಮಸ್ಯೆಗಳ ಪರಿಹರಿಸಿ
ಕನಸಿಗೂ ವಾಸ್ತವಕ್ಕೂ ವಿಕರ್ಣದ ಏಣಿ ಹಾಯಿಸಿ
ಹಗಲಿರುಳ ಶ್ರಮದ ಉಳಿತಾಯ ಕೂಡಿಸಿ
ಸಿಹಿಮುತ್ತಿಗೆ ರಶೀದಿ ಕೊಟ್ಟರೆ
ಪ್ರೀತಿಯಲಿ ಗಣಿತವಿದ್ದರೆ ಹೇಗೆ?..
ತ್ರಿಕೋನಮಿತಿಯ ಸೂತ್ರಕ್ಕಿಂತ ಮಿಗಿಲಾದುದೇನಲ್ಲ
ಸಮಾಂತರ ಶ್ರೇಡಿಯ ಅಂತರವು ಸಲ್ಲ
ಪೈಥಾಗೋರಸ್ ಪ್ರಮೇಯದಲ್ಲೇ ಬದುಕಿಲ್ಲವೇ?!
ನಮ್ಮಿಬ್ಬರೊಲವು ಪ್ರೀತಿಗೆ ಸಮವಲ್ಲವೇ?
ಪ್ರೀತಿಯೇ ಲಾಭ ಕೋಪವೇ ನಷ್ಟ
ಶೇಕಡವೆಷ್ಟಾದರೂ ನಮ್ಮೊಳಗಿರಲಿ
ಖುಷಿಯ ಸಂಭವನೀಯತೆ ಹೆಚ್ಚಿರುವಾಗ
ಚಿಂತೆಯ ವಿಕಲ್ಪಗಳೇತಕೆ?!
ಹೇಳು ಹುಡುಗಿ ಒಮ್ಮೆ ಯೋಚಿಸಿ
ಪ್ರೀತಿಯಲಿ ಗಣಿತವಿದ್ದರೆ ಹೇಗೆ?!..
-ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!