ದೇವರ ಮುಂದೆ ನಿಂತವ ಕೈಮುಗಿದು ಬೇಡಿಕೊಳ್ಳುತ್ತಿದ್ದಾನೆ. ಭಗವಂತ ಹೀಗೆ ನೋವು ಕಷ್ಟಗಳನ್ನ ನೀಡ್ತಾ ಇರು. ಎಲ್ಲವನ್ನ ಮಾಯಗೊಳಿಸಿ ಸಂಪೂರ್ಣ ಸುಖವನ್ನಂತು ನೀಡಬೇಡ. ಸಂಪೂರ್ಣ ಸುಖವನ್ನ ನೀಡಿ ಬಿಟ್ಟರೆ ನಾನಂತೂ ಸೋಮಾರಿಯಾಗಿ ಬಿಡ್ತೇನೆ. ಬದುಕುವುದಕ್ಕೆ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಅದಲ್ಲದೆ ನಿನ್ನನ್ನ ತುಂಬಾ ನಂಬಿಕೊಂಡವ ಒಂದು ದಿನವೂ ನಿನ್ನನ್ನು ಸ್ಮರಣೆ ಮಾಡದೆ ಬದುಕು ಸಾಧ್ಯವಾಗುವುದಿಲ್ಲ. ಸುಖ ನನ್ನ ತಲೆಗೇರಿದರೆ ನಿನ್ನನ್ನು ಮರೆತು ಬಿಟ್ಟುಬಿಡುತ್ತೇನೆ. ಹಾಗಾಗಿ ಕಷ್ಟಗಳನ್ನ ದುಃಖವನ್ನು ಪ್ರತಿದಿನವೂ ಚೂರಾದರೂ ನೀಡ್ತಾ ಇರು. ಆ ಕ್ಷಣವಾದರೂ ನಿನ್ನನ್ನು ಮನಸಾರೆ ಸ್ಮರಿಸಿ ಕೈಮುಗಿದು ಬೇಡಿಕೊಳ್ಳುವ ಸ್ಥಿತಿ ನನ್ನದಾಗುತ್ತೆ. ನಾನು ಪ್ರತಿದಿನ ಕಷ್ಟವನ್ನು ಎದುರಿಸುವುದಕ್ಕೆ ಹೊಸ ರೀತಿಯಲ್ಲಿ ಬದುಕನ್ನು ಯೋಚಿಸುತ್ತೇನೆ .ಎಲ್ಲ ಸಾಮರ್ಥ್ಯವನ್ನು ನನ್ನೊಳಗೆ ತುಂಬಿಸಿಕೊಳ್ಳುತ್ತೇನೆ. ಭಗವಂತ ಬೇಡಿಕೆ ಇಷ್ಟೆ ಕಷ್ಟ ನೋವನ್ನ ಪ್ರತಿದಿನವೂ ನೀಡುತ್ತಾನೆ ಇರು. ಇವನ ಈ ಬೇಡಿಕೆಯ ಮಾತು ನನಗೆ ವಿಚಿತ್ರ ಅನಿಸುವುದ್ದಕ್ಕೆ ಪ್ರಾರಂಭವಾಯಿತು. ಹೀಗೂ ಬೇಡುತ್ತಾರಾ ಅಂತ? ನೀವೇನು ಹೇಳ್ತಿರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!