ಅವಳಿಗೆ ಬೆಕ್ಕನ್ನು ಕಂಡರಾಗುತ್ತಿರಲಿಲ್ಲ.‌ ಸಣ್ಣವಳಿಂದಲೇ ಒಂಥರಾ ದ್ವೇಷ. ಮನೆಗಂತೂ ಸೇರಿಸೋದೆ ಇಲ್ಲ. ಬೆಕ್ಕನ್ನು ಪ್ರೀತಿಸುವವರು ಸಿಕ್ಕರೆ ವಾದವಿವಾದಗಳ ಸುರಿಮಳೆಯೇ ನಡೆಯುತ್ತಿತ್ತು. ಹೀಗಿದ್ದ ಅವಳ ಬಾಳಲ್ಲಿ ಮದುವೆಯ ಶುಭಯೊಗವು ಕೈಗೂಡಿ ಗಂಡನ ಮನೆಗೆ ಕಾಲಿಟ್ಟಲು ಆ ಮನೆಯೋ ಪ್ರಾಣಿಗಳ ಆವಾಸ ಸ್ಥಾನ. ಕೊನೆಗೆ ಎಲ್ಲವನ್ನು ಒಪ್ಪಿ ಮುನ್ನಡೆದಳು. ಇತ್ತೀಚಿಗೆ ಆ ಮನೆಯ ಪುಟ್ಟ ಬೆಕ್ಕೊಂದು ಉಸಿರು ನಿಲ್ಲಿಸಿತು. ಇವತ್ತಿನವರೆಗೂ ಆಕೆಯ ಕಣ್ಣಲ್ಲಿ ಸೂತಕದ ಛಾಯೆ ಕಡಿಮೆಯಾಗಿಲ್ಲ. ಕಣ್ಣೀರು ಆಗಾಗ ಇಣುಕಿ ಮಾಯವಾಗುತ್ತೆ. ಅವಳು ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದಾಳೆ ಎಲ್ಲ ಪುಟ್ಟ ಜೀವಗಳನ್ನ. ಕಾಲ ಅರ್ಥ ಮಾಡಿಸುತ್ತೆ ಎಲ್ಲವನ್ನ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ