ಡೈವೋರ್ಸ್

ಸೂರಿ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳಾಗಿದ್ದವು. ಮಗ ಮತ್ತು ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಸೂರಿ ಮಗನಿಗೆ ಕಾಲ್ ಮಾಡಿದ. ಮಗ ಕಾಲ್ ರಿಸೀವ್ ಮಾಡುತ್ತಿದ್ದಂತೆ, "ನೋಡಪ್ಪಾ, ಈ ವಿಷಯ ಹೇಳೋಕೆ ನನಗೆ ಕಷ್ಟ ಆಗ್ತಿದೆ. ನಿಂಗೂ ಬೇಜಾರಾಗಬಹುದು. ಬೆಳಗ್ಗೆ ಬೆಳಗ್ಗೆ ನಿನ್ನ ಮೂಡು ಹಾಳುಮಾಡುತ್ತಿರೋದಕ್ಕೆ ಸಾರಿ; ಆದರೆ ನಿನಗೊಂದು ವಿಷಯ ಹೇಳಲೇಬೇಕಿದೆ. ನಾನು ನಿಮ್ಮಮ್ಮನಿಗೆ ಡಿವೋರ್ಸ್ ಕೊಡ್ತಿದ್ದೀನಿ. ೪0 ವರ್ಷ ಅವಳನ್ನು ಸಹಿಸಿಕೊಂಡಿದ್ದು ಸಾಕಾಗಿದೆ'' ಅಂದ. ಮಗನಿಗೆ ಆಶ್ಚರ್ಯ. ''ಇಷ್ಟು ದಿನ ಚೆನ್ನಾಗೇ ಇದ್ರಲ್ಲ, ಏನಾಯ್ತು?'' ಅಂತ ಕೇಳಿದ. ಅದಕ್ಕೆ ಸೂರಿ, "ನನಗೆ ನಿಮ್ಮಮ್ಮನ ಮುಖ ನೋಡಿದ್ರೆ ಆಗ್ತಾ ಇಲ್ಲ. ಅದ್ ಬಿಡು, ಈಗ ಅದನ್ನೆಲ್ಲಾ ಮಾತಾಡೋಕೆ ನನಗೆ ಮೂಡಿಲ್ಲ, ನಾನು ನಾಳೆನೇ ಡಿವೋರ್ಸ್‌ ಗೆ ಅಪ್ಲೈ ಮಾಡ್ತೀನಿ. ಅದನ್ನ ಮತ್ತೆ ನಿನ್ನ ತಂಗಿಗೆ ಹೇಳುವಷ್ಟು ಪೇಶನ್ಸ್ ನಂಗಿಲ್ಲ. ನೀನೇ ಅವಳಿಗೆ ಕಾಲ್ ಮಾಡಿ ಹೇಳು'' ಅಂತ ಫೋನಿಟ್ಟ. ಸೂರಿ ಮಗ ತಕ್ಷಣ ತನ್ನ ತಂಗಿಗೆ ಕಾಲ್ ಮಾಡಿ “ಅಪ್ಪ, ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇದ್ದಾರೆ. ನಾಳೆನೇ ಡಿವೋರ್ಸ್ ಫೈಲ್ ಮಾಡ್ತಿದ್ದಾರೆ'' ಅಂದ. ಸೂರಿ ಮಗಳಿಗೆ ಸಿಟ್ಟು ಬಂತು. 'ಅದೆಂಗಾಗುತ್ತೆ, ನಾನು ಅವರತ್ರ ಮಾತಾಡ್ತೀನಿ, ನೀನೂ ನನ್ನ ಜತೆ ಬಾ, ಯಾವುದೇ ಕಾರಣಕ್ಕೂ ನಾನು ಅಪ್ಪ ಡಿವೋರ್ಸ್ ಕೊಡೋಕೆ ಬಿಡಲ್ಲ'' ಅಂತ ಹೇಳಿ ಮರುಕ್ಷಣವೇ ಅಪ್ಪನಿಗೆ ಫೋನ್ ಮಾಡಿ, "ನೋಡಪ್ಪಾ, ಈ ವಯಸ್ಸಲ್ಲಿ ಸುಮ್ಮೆ ಹೆಂಗೆಂಗೋ ಆಡಬೇಡ. ನೀನು ನಮ್ಮ ಜತೆ ಮಾತಾಡದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳೋಹಾಗಿಲ್ಲ. ನಾವು ನಾಳೆನೇ ಇಂಡಿಯಾಗೆ ಬರ್ತಾ ಇದ್ದೀವಿ, ಅಲ್ಲೇ ಕುಳಿತು ಮಾತಾಡೋಣ, ಅಷ್ಟೇ'' ಅಂತ ಹೇಳಿ ಫೋನಿಟ್ಟಳು. ಈ ಕಡೆ ಕಾಲ್ ಕಟ್ ಮಾಡಿದ ಸೂರಿ, ಶ್ರೀಮತಿ ಕಡೆ ತಿರುಗಿ ಹೇಳಿದ, ''ಲೇ, ದಸರಾ ಹಬ್ಬಕ್ಕೇನೋ ವ್ಯವಸ್ಥೆ ಆಯ್ತು, ದೀಪಾವಳಿಗೆ ಏನ್ ಸುಳ್ ಹೇಳೋದು?'".

***

ದತ್ತು ಮಗ

ಸೂರಿ: ಮಗನೇ, ನಿನ್ನನ್ನು ದತ್ತು ತೆಗೆದುಕೊಳ್ಳಲಾಗಿದೆ.

ಮರಿ ಸೂರಿ: ಅದೇ ಮತ್ತೆ… ನೀವು ನನ್ನನ್ನು ನೋಡಿಕೊಳ್ಳುವ ರೀತಿಯಿಂದ ನನಗೆ ಮೊದಲೇ ಸಂಶಯವಿತ್ತು. ಸರಿ, ನನಗೂ ನನ್ನ ನಿಜವಾದ ಅಪ್ಪ ಅಮ್ಮನನ್ನು ನೋಡುವ ಕಾತುರ ಇದೆ.

ಸೂರಿ: ಅಯೋಗ್ಯ ನಾವೇ ನಿನ್ನ ನಿಜವಾದ ಹೆತ್ತವರು ಕಣೋ. ಹೊಸ ಅಪ್ಪ ಅಮ್ಮ ಇನ್ನೊಂದರ್ಧ ಗಂಟೆಯಲ್ಲಿ ಬರುತ್ತಾರೆ. ನಿನ್ನ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿ ಹೊರಡಲು ತಯಾರಾಗು !

***

ಮುಂದಕ್ಕೆ…

ಸೂರಿ ಮತ್ತು ಗಾಂಪ ಇಬ್ಬರೂ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಸೂರಿ: ಈ ವಾಟ್ಸಾಪ್ ಮತ್ತು ಫೆಸ್ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳು ಮಾನವನನ್ನು ತುಂಬಾ ಮುಂದಕ್ಕೆ ತಂದು ನಿಲ್ಲಿಸುತ್ತವೆ.

ಗಾಂಪ: ಅದು ಹೇಗೆ?

ಸೂರಿ: ಉದಾಹರಣೆಗೆ ನನ್ನನ್ನೇ ತೆಗೆದುಕೋ. ನಾನು ಎರಡು ಸ್ಟೇಷನ್ ಮೊದಲೇ ಇಳಿಯಬೇಕಿತ್ತು !

***

ಕೆಂಪು ಸಿಗ್ನಲ್

ಕೆಂಪು ಸಿಗ್ನಲ್ ದಾಟಿ ಸಂಚರಿಸಿದ್ದಕ್ಕಾಗಿ ಸೂರಿಯನ್ನು ಟ್ರಾಫಿಕ್ ಪೋಲೀಸ್ ಅಧಿಕಾರಿ ತಡೆದು ಹೀಗೆ ಪ್ರಶ್ನಿಸಿದರು…

ಪೋಲೀಸ್: ಏಕೆ, ಕೆಂಪು ಸಿಗ್ನಲ್ ಕಾಣಿಸಲಿಲ್ಲವೇ?

ಸೂರಿ: ಸಿಗ್ನಲ್ ಏನೋ ಕಾಣಿಸಿತು, ಆದರೆ ನೀವು ಆ ಮರದ ಹಿಂದೆ ಬಚ್ಚಿಟ್ಟುಕೊಂಡಿದ್ದು ಕಾಣಿಸಲಿಲ್ಲ ಸರ್ !

***

ಸಮಯಹರಣ

ಶ್ರೀಮತಿ: ಈ ವಾಟ್ಸಾಪ್, ಫೇಸ್ಬುಕ್ ಎಲ್ಲಾ ಸಮಯಹರಣ ಮಾಡುತ್ತದೆ. ಆದ್ದರಿಂದ ಅವುಗಳನ್ನು ಬಿಟ್ಟುಬಿಡಲು ಯೋಚಿಸಿದ್ದೇನೆ.

ಸೂರಿ: ನಿನ್ನ ಈ ಯೋಚನೆಯೇನೋ ಒಳ್ಳೆಯದೇ. ಆದರೆ ಇನ್ನೊಮ್ಮೆ ಯೋಚಿಸಿ ನೋಡು. ಈ ವಯಸ್ಸಿನಲ್ಲಿ ಯಾನು ನಿನ್ನನ್ನು ಬ್ಯೂಟಿಫುಲ್, ಮುದ್ದಾಗಿ ಕಾಣಿಸುತ್ತಿರುವೆ, ಸ್ಮಾರ್ಟ್.. ಎಂದೆಲ್ಲಾ ಹೊಗಳುತ್ತಾರೆ, ಲೈಕ್ ಕೊಡುತ್ತಾರೆ?

ಶ್ರೀಮತಿ: ಯಾಕ್ರೀ ಸೀರಿಯಸ್ ಆಗ್ತೀರಾ? ನಾನು ತಮಾಷೆಗೆ ಹಾಗೆ ಅಂದದ್ದು.

***

ಫೇಸ್ಬುಕ್ ಚಾಟ್

ಕಾಲೇಜು ಕನ್ಯೆ ಶ್ರೀಮತಿ ರಸ್ತೆ ಬದಿಯಲ್ಲಿ ಭಿಕ್ಷುಕನೊಬ್ಬ ಬೇಡುತ್ತಿರುವುದನ್ನು ನೋಡಿಯೂ ನೋಡದಂತೆ ಮುಂದೆ ಸಾಗುತ್ತಿದ್ದಳು. ಅವಳನ್ನು ಗಮನಿಸಿದ ಆ ಭಿಕ್ಷುಕ ಕೀಟಲೆಯ ದನಿಯಲ್ಲಿ ಹೇಳಿದ : ‘ಏನ್ ಮೇಡಂ, ಫೇಸ್ಬುಕ್ ನಲ್ಲಿ ನಂಜೊತೆ ಗಂಟೆಗಟ್ಟಲೆ ಚಾಟಿಂಗ್ ಮಾಡ್ತೀರಿ. ಈಗ ಎದುರಿಗೆ ಬಂದ್ರೂ ನೋಡಿಯೂ ಮಾತನಾಡಿಸದೆ ಹೋಗ್ತಿದ್ದೀರಿ’ ಎಂದ.

***

ರಾಣಿ ಲಕ್ಷ್ಮೀಬಾಯಿ

ಇತಿಹಾಸ ಪರೀಕ್ಷಾ ಪ್ರಶ್ನೆಪತ್ರಿಕೆಯಲ್ಲಿ ಹೀಗೊಂದು ಪ್ರಶ್ನೆ.. ‘ರಾಣಿ ಲಕ್ಷ್ಮೀಬಾಯಿ ಬಗ್ಗೆ ನಾಲ್ಕು ವಾಕ್ಯ ಬರೆಯಿರಿ ‘

ಸೂರಿ ಹೀಗೆ ಬರೆದ “ಹುಡುಗಿಯರು ತವರು ಮನೆಯಲ್ಲಿ ‘ರಾಣಿ’ ತರಹ ಇರುತ್ತಾರೆ. ವಿವಾಹದ ನಂತರ ಅತ್ತೆ ಮನೆಗೆ ಆಗಮಿಸುವಾಗ ‘ಲಕ್ಷ್ಮಿ’ ಯಂತೆ ಸ್ವಾಗತಿಸಲ್ಪಡುತ್ತಾರೆ. ಕ್ರಮೇಣ ಅಡುಗೆ, ಬಟ್ಟೆ ಒಗೆಯುವುದು, ಮನೆಯನ್ನು ಶುಚಿಗೊಳಿಸುವುದು ಮತ್ತಿತರ ಕೆಲಸಗಳಿಂದ ಮನೆಕೆಲಸದ ‘ಬಾಯಿ’ಯಾಗುತ್ತಾಳೆ. ಹೀಗೆ ಹುಡುಗಿಯರು ತಮ್ಮ ಜೀವನದಲ್ಲಿ ‘ರಾಣಿ ಲಕ್ಷ್ಮೀಬಾಯಿ’ ಎಂದು ಅನಿಸಿಕೊಳ್ಳುತ್ತಾರೆ!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ