ಅಮ್ಮ ನಮ್ಮೂರು ಏನಾದರೂ ಬದಲಾಗಿದ್ದೀಯಾ? ಯಾಕೆ ಮೊದಲಿನ ತರಹ ನಮ್ಮೂರಿಲ್ಲ. ಹಬ್ಬ ಬಂತು ಅಂದ್ರೆ ನಮ್ಮ ಮನೆ ಮನೆಗೆ ಹುಲಿ, ಸಿಂಹ ಕರಡಿ ವೇಷಗಳು ಬಂದು ಹೋಗ್ತಾ ಇದ್ದವು. ನಮ್ಮನ್ನ ಮಾತನಾಡಿಸುತ್ತಿದ್ದರು. ನಮ್ಮ ಮನೆ ಅಂಗಳದಲ್ಲಿ ಕುಣಿತ ಇದ್ದು ನಾವು ಅದಕ್ಕೆ ದುಡ್ಡು ಕೊಡ್ತಾ ಇದ್ವಿ ನಾವು ಅದರ ಜೊತೆಗೆ ಕುಣಿಯುತ್ತಾ ಇನ್ನೊಂದಷ್ಟು ಮನೆಗಳಿಗೆ ಆ ಹುಲಿ ಸಿಂಹಗಳ ಹಿಂದೇನೆ ಹೋಗ್ತಾ ಇದ್ವಿ. ಆದರೆ ಈಗ ಅದು ನಮ್ಮ ಮನೆಗಳಿಗೆ ಬರುವುದನ್ನು ನಿಲ್ಲಿಸಿ ಬಿಟ್ಟಿದೆ ಯಾಕೆ ? ಪೇಟೆಗಳಲ್ಲಿ ದೊಡ್ಡವರ ಮನೆಗಳಲ್ಲಿ ಮಾತ್ರ ಹುಲಿ ಸಿಂಹಗಳು ಕುಣಿಯುತ್ತಿದ್ದಾವೆ ಯಾಕೆ ? ನಾವು ಕೊಡುವ ಐವತ್ತು ನೂರು ಸಾಕಾಗೋದಿಲ್ಲವಾ? ನಮ್ಮನ್ನ ಹುಲಿ ಸಿಂಹಗಳು ಯಾಕೆ ಮರಿಬೇಕು ? ನಾವು ಅವುಗಳನ್ನು ಕಾಯ್ತಾ ಇದ್ದೇವೆ ತಾನೇ, ಇಷ್ಟು ದಿನದವರೆಗೆ ನಮ್ಮ ಒಡನಾಡಿಯಾಗಿದ್ದ ಹುಲಿ ಸಿಂಹದ ವೇಷಗಳು ಈಗ ದೊಡ್ಡವರ ಮನೆಯ ಅಂಗಳದಲ್ಲಿ ಮಾತ್ರ ನಿಲ್ಲುವುದಕ್ಕೆ ಆರಂಭ ಮಾಡಿದೆ. ನನಗೆ ಮೊದಲಿದ್ದ ಊರಬೇಕು ಎಲ್ಲರ ಹಾಗೆ ನಮ್ಮ ಮನೆ ಅಂಗಳಕ್ಕೆ ಎಲ್ಲರೂ ಬರುವಂತಾಗಬೇಕು. ಮಗುವಿನ ಪ್ರಶ್ನೆಗೆ ತಾಯಿಯ ಬಳಿ ಉತ್ತರವಿರಲಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ