ಹೀಗೊಂದು ಕಾರು ಸಾಲ!
ಸೂರಿ ನಗರದ ಬ್ಯಾಂಕ್ ಮ್ಯಾನೇಜರ್ ಬಳಿ.ಡಿ ಹೋಗಿ, 'ಸರ್, ನನ್ನ ಹೊಸ ಕಾರನ್ನು ಗಿರವಿ ಇರಿಸಿಕೊಂಡು ಹತ್ತು ಸಾವಿರ ರೂಪಾಯಿ ಸಾಲ ಬೇಕಿತ್ತು ಕೊಡಬಹುದೇ?' ಎಂದು ಕೇಳಿದ. ಮ್ಯಾನೇಜರ್. ಕಾರನ್ನು ಬ್ಯಾಂಕಿನ ಗೋದಾಮಿನಲ್ಲಿರಿಸಿಕೊಂಡು ಅವನಿಗೆ ಸಾಲದ ಹಣ ನೀಡಿದರು.
ಹದಿನೈದು ದಿನದ ಬಳಿಕ ಸೂರಿ ಮತ್ತೆ ಬ್ಯಾಂಕಿಗೆ ಬಂದು ಬಡ್ಡಿಯೊಂದಿಗೆ ಸಾಲ ಮರಳಿಸಿ ಕಾರನ್ನು ಹಿಂದಕ್ಕೆ ಪಡೆದ. ಮ್ಯಾನೇಜರ್ ಅಚ್ಚರಿಯಿಂದ, 'ಹೊಸ ಕಾರನ್ನು ನೀವು ಕೇವಲ ಹತ್ತು ಸಾವಿರ ರೂಪಾಯಿಗೆ ಗಿರವಿ ಇಡುವ ಅಗತ್ಯವೇನಿತ್ತು?' ಕೇಳಿದರು.
'ನಾನು ಈ ಪಟ್ಟಣಕ್ಕೆ ಹೊಸದಾಗಿ ಬಂದವನು. ಗೆಳೆಯರ ಜೊತೆಗೆ ಅವರ ಕಾರಿನಲ್ಲಿ ಊರು ಸುತ್ತಲು ಹೋಗುವಾಗ ನನ್ನ ಕಾರನ್ನು ಪಾರ್ಕಿಂಗ್ ಮಾಡಲು ಯೋಗ್ಯ ಸ್ಥಳ ಬೇರೆಲ್ಲಿಯೂ ಸಿಕ್ಕಿರಲಿಲ್ಲ' ಎಂದ ಸೂರಿ.
***
ಚಂದ್ರ ವೀಕ್ಷಣೆ
ಟೀಚರ್: ವಿದ್ಯಾರ್ಥಿಗಳೇ, ನಿಮ್ಮ ಹೆಸರು, ಅಭ್ಯಾಸಗಳು ಏನು ಅಂತಾ ಹೇಳಿ?
ಎಲ್ಲರೂ ಅವರವರ ಹೆಸರು ಹೇಳಿ, ಎಲ್ಲರೂ ತಮ್ಮ ತಮ್ಮ ಅಭ್ಯಾಸ 'ಚಂದ್ರ' ನೋಡುವುದು ಅಂತ ಹೇಳಿದರು.
ಟೀಚರ್: ಹೌದಾ? ಎಲ್ಲರ ಅಭ್ಯಾಸ ಒಂದೇ ತರಹ ಇದೆ. ಈಗ ಹುಡುಗಿಯರನ್ನು ಕೇಳುವ.
ಮೊದಲ ಹುಡುಗಿ: ನನ್ನ ಹೆಸರು 'ಚಂದ್ರ',
ಅದನ್ನು ಕೇಳಿ ಟೀಚರ್ ಶಾಕ್, ಹುಡುಗರು ರಾಕ್!
***
ಕುಜ ದೋಷ
ಶ್ರೀಮತಿ: ಪುರೋಹಿತರೆ, ನನ್ನ ಗಂಡ ಈ ಪಾಟಿ ಕುಡಿದು ಜಗಳ ಅಡ್ತಿರ್ತಾನೆ. ನೀವು ಜಾತಕ ಸರಿಯಾಗಿ ನೋಡಿರಲಿಲ್ವಾ?
ಪುರೋಹಿತರು: ಜಾತಕ ನೋಡಿ ಅವರಿಗೆ 'ಕುಜ ದೋಷ' ಇದೆ ಅಂತ ಹೇಳಿದ್ದಲ್ಲ.
ಶ್ರೀಮತಿ: 'ಕುಜ ದೋಷ' ಅಂದ್ರೆ?
ಪುರೋಹಿತರು: ಕುಡಿದು ಜಗಳ ಆಡೋ ದೋಷ !
***
ಬಟ್ಟೆ ತರಲು
ಸೂರಿ: ಅಮ್ಮ, ಎಲ್ಲಿಗೆ ಹೋಗ್ತಾ ಇದೀಯಾ?
ಅಮ್ಮ: ಬಟ್ಟೆ ತರಲು.
ಸೂರಿ: ನಾನೂ ಬರುತ್ತೇನೆ.
ಅಮ್ಮ: ಬಾ. ಮಳೆ ಬರುವ ಹಾಗಿದೆ, ಟೆರೇಸ್ ಮೇಲೆ ಒಣಹಾಕಿರುವ ಬಟ್ಟೆ ತರೋಣ.
ಸೂರಿ: ಚೂರು ಕೆಲಸ ಇದೆ. ನೀನೇ ಹೋಗಿ ಬಾ ಅಮ್ಮ
***
ಸೈಕಲ್ ಬೀಗ
ಒಬ್ಬ ಚಿಕ್ಕ ಹುಡುಗ ತನ್ನ ಸೈಕಲ್ ಅನ್ನು ಪಾರ್ಲಿಮೆಂಟ್ ಭವನದ ಹತ್ತಿರ ನಿಲ್ಲಿಸಿ ತಿರುಗಾಡುತ್ತಿದ್ದ.
ಪೊಲೀಸ್ ಕಾನ್‌ಸ್ಟೇಬಲ್: ನಿನ್ನ ಸೈಕಲ್ ಅನ್ನು ಇಲ್ಲಿ ಏಕೆ ನಿಲ್ಲಿಸಿದ್ದೀಯಾ? ಇಲ್ಲಿ ಸಂಸದರು, ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ನಾಯಕರು ಸುತ್ತಾಡುತ್ತಾರೆ. ಇಲ್ಲಿ ನಿಲ್ಲಿಸಬೇಡ ಮುಂದೆ ಹೋಗು.
ಹುಡುಗ: ನೀವೇನೂ ಹೆದರಬೇಡಿ ಪೊಲೀಸ್ ಅಂಕಲ್, ನಾನು ನನ್ನ ಸೈಕಲ್ ಗೆ ಬೀಗ ಹಾಕಿದ್ದೀನಿ.
***
(ಸಂಗ್ರಹ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!