ನಾವು ಎಸೆಯಬೇಕೆಂದು ತೀರ್ಮಾನಿಸಿದರೆ
ನಿಮ್ಮ ಮುಖ ಮೂತಿ ಉಳಿಯೋದಿಲ್ಲ
ಎಲ್ಲೆಂದರಲ್ಲಿ ಓಡಾಡಿದ
ಎಲ್ಲವೂ ಮತ್ತಿಕೊಂಡ ಚಪ್ಪಲಿಗಳಿವು
ನೀವು
ಬಿಸಾಡಿರಬಹುದು
ನಾವು ಬಾರಿಸಿಯೇ ಬಿಡುತ್ತೇವೆ
ಲಟಲಟ ಪಟ ಪಟ.
ಸಂವಿಧಾನದ ಚೌಕಟ್ಟು ಮೀರಿದ್ದೀರೆಂದರೆ
ನೀವು ದೇಶದ್ರೋಹಿಗಳೆ ಹೌದು
ಅಸಹಿಷ್ಣುಗಳಿಗೆ
ದೇಶದಲ್ಲಿ ಜಾಗವಿಲ್ಲ
ಖಾಲಿ ಮಾಡಿ , ನಿಮ್ಮ ಸ್ಥಾನಗಳನ್ನ
ನಾವು ಎದ್ದು ಹೊರಟರೆ
ಭೂಮಿ ನಡುಗುತ್ತದೆ,
ಸಾಗರ ಉಕ್ಕುತ್ತವೆ
ನದಿ ಕೊಳ್ಳಗಳು
ಭೋರ್ಗರೆಯುತ್ತವೆ.
ಈ ವಿಪ್ಲವಕ್ಕೆ ನೀವೇ ಹೊಣೆಯಾಗುತ್ತೀರಿ
ನಾವು ಎಸೆಯಬೇಕೆಂದು ತೀರ್ಮಾನಿಸಿದರೆ
ನಿಮ್ಮ ಮುಖ ಮೂತಿ ಉಳಿಯೋದಿಲ್ಲ
ಎಲ್ಲೆಂದರಲ್ಲಿ ಓಡಾಡಿದ
ಎಲ್ಲವೂ ಮತ್ತಿಕೊಂಡ ಚಪ್ಪಲಿಗಳಿವು
-ವಿಶ್ವಾರಾಧ್ಯ ಸತ್ಯಂಪೇಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!