ಕುಂಬಳಕಾಯಿ ಕದ್ದದ್ದು ಯಾರು
ಎಂದು ಪ್ರಶ್ನಿಸಿದರೆ
ಕಳ್ಳರು ಹೆಗಲು ಮುಟ್ಟಿ
ನೋಡಿಕೊಳ್ಳುತ್ತಾರೆ !
ಕೆಲವು ವಿಷಯಗಳನ್ನು
ಹೇಳಿದಾಗ
ಸಂಬಂಧಪಟ್ಟವರು
ತನಗೇ ಹೇಳಿದ್ದು ಅಂತ
ತಿಳಿಯುತ್ತಾರೆ !
ಭಕ್ತಿಯಿಂದ ಪ್ರಾರ್ಥಿಸಿದಾಗ
ತನ್ನನ್ನೇ ಪ್ರಾರ್ಥಿಸಿದ್ದು ಅಂತ
ಸಂಬಂಧಪಟ್ಟ ದೇವರೂ ತಿಳಿದು
ಒಲಿಯುತ್ತಾರೆ !
***
ಶಕ್ತಿ-ಭಕ್ತಿ-ಮುಕ್ತಿ !
ಶಕ್ತಿ
ನಮಗೋಸ್ಕರವೇ ಹೊರತು
ನೋಡುವವರಿಗೋಸ್ಕರವಲ್ಲ !
ಶಕ್ತಿ ಮೈನೆರೆಯಬೇಕು !
ಭಕ್ತಿ
ನಮಗೋಸ್ಕರವೇ ಹೊರತು
ನೋಡುವವರಿಗೋಸ್ಕರವಲ್ಲ
ಭಕ್ತಿಯಿಂದ ಮೈ ಮರೆಯಬೇಕು !
ಮುಕ್ತಿ
ನಮಗೋಸ್ಕರವೇ ಹೊರತು
ನೋಡುವವರಿಗೋಸ್ಕರವಲ್ಲ
ಮುಕ್ತಿ ಸಾಧನೆಯಲ್ಲಿ ಮೈತೊರೆಯಬೇಕು !
-ಮೌನಮುಖಿ
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!