ವಂಶವೃಕ್ಷ ನೆಲೆಯಿಲ್ಲದೆ
ಇಂದು ನೆಲಕ್ಕುರುಳಿತು,
ಆವರಣವ ದಾಟಿ ಕೊನೆಗೆ
ಯಾನವು ಮುಗಿಯಿತು
ನಾಯಿ ನೆರಳು, ಸಾಕ್ಷಿಯ
ನಿರಾಕರಣವ ಮಾಡಿತು,
ಇಂಚು ಬಿಡದೆ ಅಂಚಿಗೂ
ಈಗ ಗ್ರಹಣ ಹಿಡಿಯಿತು
ಸಾರ್ಥವಿರದ ತಂತುವಲ್ಲಿ
ಭೀಮಕಾಯ ಬೆಳೆಯಿತು,
ಗೃಹಭಂಗದ ಅನ್ವೇಷಣದಿ
ಮಂದ್ರವಿಲ್ಲಿ ಮೊಳೆಯಿತು
ನಾನೇಕೆ ಬರೆಯುತ್ತೇನೆ ಎಂಬ
ಪ್ರಶ್ನೆಯ ದಾಟುತ ಬಂದರು,
ಜಲಪಾತದ ಕವಲು ಕಂಡು
ಬೆಳಕು ಮೂಡಿತು ಎಂದರು
ಉತ್ತರಕಾಂಡದಿ ಉತ್ತರವೇ
ನೀಡದೇ ದೂರ ಸರಿದರು,
ತಬ್ಬಲಿ ನೀನಾದೇ ಮಗನೇ
ಎಂದು ಜೀವ ತೊರೆದರು
-ಮಹಾಂತೇಶ್ ಕುಂಬಾರ್, ರನ್ನ ಬೆಳಗಲಿ
ಚಿತ್ರ ಕೃಪೆ: ಇಂಟರ್ನೇಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!