ನಾವಿಕನ ಕಾಣದೆ
ಒಂಟಿಯಾಗಿ ನಿಂತಿರುವೆ
ಅಂಬಿಗನ ಹುಟ್ಟುಗೋಲಿಲ್ಲದೆ
ನಿಂತ ನೀರಿನ ಮೇಲಣ
ಬರಡಾಗಿ ಕುಳಿತಿರುವೆ
ನಾವಿಕರ ಕಲರವವಿಲ್ಲದೆ
ಬಣಗುಟ್ಟುತ್ತಿದೆ ನದಿಯು
ಸುತ್ತಲೂ ಪ್ರಕೃತಿಯ ಸೊಬಗು
ತುಂಬಿ ತುಳುಕಿಹುದು
ನಿಸರ್ಗದ ಮಡಿಲಲ್ಲಿದ್ದರೂ
ಮಂಕಾಗಿದೆ ಜೀವನ
ಮಕ್ಕಳ ಹರ್ಷೋಲ್ಲಾಸದ ನಗುವಿಲ್ಲ
ನವ ದಂಪತಿಗಳ ಪಿಸು ಮಾತಿಲ್ಲ
ಗೆಳೆಯರ ಗುಂಪಿನ ಕೇಕೆಯಿಲ್ಲ
ಪ್ರಕೃತಿಯ ಚಿತ್ರ ಬಿಡಿಸುವ ಚಿತ್ರಕಾರನಿಲ್ಲ
ಹೊಸ ಬೆಳಕ ಚೆಲ್ಲುವ ಕಿರಣಕ್ಕೆ
ಕಾದು ಕುಳಿತಿಹೆ ನೋಡಿ.
-ಆರತಿ ರಘುವೀರ ಮೈಸೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!