ಟೊಮೆಟೋ ಹೆಚ್ಚಿಕೊಂಡು ಅರ್ಧ ಭಾಗವನ್ನು ಲವಂಗ, ಮೆಣಸಿನಕಾಯಿಯೊಂದಿಗೆ ರುಬ್ಬಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಹೆಚ್ಚಿದ ಈರುಳ್ಳಿ ,ಉಳಿದರ್ಧ ಟೊಮೆಟೋ, ಕರಿಬೇವು ಹುರಿದು, ನಂತರ ಅರೆದ ಟೊಮೆಟೋ ಸೇರಿಸಿ ಒಂದೆರಡು ನಿಮಿಷ ಬಾಡಿಸಿ ಅಕ್ಕಿಯನ್ನು ಹಾಕಿ ಒಮ್ಮೆ ಕೈಯಾಡಿಸಿ ಎರಡು ಕಪ್ ನೀರು, ಉಪ್ಪು ಸೇರಿಸಿ ಕಲಕಿ ಎರಡೂ ವಿಶಿಲ್ ಕೂಗಿಸಿ.

-ಕೆ ವಿ ರಾಜಲಕ್ಷ್ಮೀ, ಬೆಂಗಳೂರು