ಪ್ರೀತಿಯೆನುವ ಸ್ನೇಹವನ್ನು,ಮರೆತಿರುವೆವೂ ಇಂದು 

ಸ್ವಾರ್ಥದಲ್ಲೆ ಒಲವನರಸಿ, ಸಾಗುತಿರುವೆವೂ ಇಂದು 

 

ಜಾತಿ ಜಾತಿ ಎನುತ ಸಾಗಿ,ರೋಷವರಳಿ ನಿಂತೆವೇಕೆ

ಕಣ್ಣು ಇದ್ದೂ ಕುರುಡರಂತೆ, ಕಾಣುತಿರುವೆವೂ ಇಂದು 

 

ತಪ್ಪು ಇರದಿಹ ಜನರ ಜೊತೆಗೇ, ದ್ವೇಷವಿಂದು ಏತಕೆ 

ಕತ್ತಿಗೆ ನೋವನು ಕೊಡುತ, ಹೋಗುತಿರುವೆವೂ ಇಂದು

 

ಒಂದೆನುವ ಮನುಜರೊಳು, ಭೇದವನ್ನು ತರುವುದೇಕೆ 

ಸದ್ದಿರುವ ಬೀದಿಯ ನಡುವೆ, ಅಳುತಿರುವೆವೂ ಇಂದು 

 

ಬಾನ ಬಯಲ ತರಹ ಜಗವು, ಇಹುದೇನು ಹೇಳು ಈಶ

ನನಸಿಲ್ಲದ ಊರ ಬದಿಯೇ, ತಿರುಗುತಿರುವೆವೂ ಇಂದು

 

ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ