ಮರ

ಟೀಚರ್:  'ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿಯು ಮರವನ್ನು ಹತ್ತಿದನು' ಈ ವಾಕ್ಯವನ್ನು 'ಮರ' ಶಬ್ದದಿಂದ ಆರಂಭಿಸಿ.

ಗಾಂಪ:  'ಮರವೇ, ಇತ್ತ ಕೇಳು... ಮಾವಿನ ಕಾಯಿಯನ್ನು ಕೀಳುವ ಸಲುವಾಗಿ ಸೂರಿ ನಿನ್ನನ್ನು ಹತ್ತುತ್ತಿದ್ದಾನೆ... ! '

***

ಕರೆಯದಿದ್ದರೂ…

ಟೀಚರ್- ಸೊಳ್ಳೆಗಳನ್ನು ನಿಮ್ಮ ಮನೆ ಭಾಷೆಯಲ್ಲಿ ಏನೆಂದು ಕರೆಯುತ್ತಾರೋ ಸೂರಿ?

ಸೂರಿ- ನಾವು ಅವುಗಳನ್ನು ಕರೆಯುವುದಿಲ್ಲ. ಅವು ತಮ್ಮಷ್ಟಕ್ಕೇ ಬಂದು ಬಿಡುತ್ತವೆ

***

ನೇಷನ್ !

ಇಂಗ್ಲಿಷ್ ಟೀಚ‌ರ್- ಜನರು ಅತಿ ಹೆಚ್ಚು ದ್ವೇಷಿಸುವ 'ನೇಷನ್ (ದೇಶ)' ಯಾವುದು?

ಸೂರಿ:  'ಎಕ್ಸಾಮಿನೇಷನ್!'

***

ವಠಾರ

ಟೀಚರ್: ನಾವು ನಮ್ಮ ಶಾಲೆಯ ವಠಾರವನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬಹುದು?

ಸೂರಿ: ಶಾಲೆಗೆ ಹಾಜರಾಗದೆ ಮನೆಯಲ್ಲೇ ಉಳಿದು ಬಿಡುವುದರಿಂದ...!

***

ಯಾವ ಕಾಲ?

ಇಂಗ್ಲಿಷ್ ಟೀಚರ್: ಒಂದು ದಿನ ನಮ್ಮ ದೇಶವು ಭ್ರಷ್ಟಾಚಾರಮುಕ್ತವಾಗಿರುತ್ತದೆ; ಇದು ಯಾವ ಕಾಲ?

ಸೂರಿ: ಪ್ಯೂಚರ್ ಇಂಪಾಸಿಬಲ್ ಟೆನ್ಸ್!

***

ಹೊಟ್ಟೆ ಉರಿ

ಪಿಂಕಿ: ಈ ಔಷಧಿ ತಕೊಳಿ ಆಂಟೀ

ಆಂಟಿ: ಯಾವ ಔಷಧಿ?

ಪಿಂಕಿ: ಹೊಟ್ಟೆ ಉರಿ ಶಮನದ ಔಷಧಿ 

ಆಂಟಿ: ನನಗೆ ಈಗ ಹೊಟ್ಟೆ ಉರಿಯುತ್ತಿಲ್ಲಮ್ಮ ಸುಮ್ಮ ನಾನ್ಯಾಕೆ ತಕೊಳಲಿ?

ಪಿಂಕಿ: ಏಕೆಂದರೆ ನನ್ನ ಅಮ್ಮ ಐವತ್ತು ಗ್ರಾಂ ಬಂಗಾರದ ನೆಕ್ಸಸ್ ಮಾಡಿಸಿದ್ದಾಳೆ. ಅದನ್ನು ತೋರಿಸುವುದಕ್ಕೆ ಇಲ್ಲಿಗೆ ಬರ್ತಿದ್ದಾಳ ಅಂಟಿ ಅದಕ್ಕೆ ಈ ಔಷಧಿ ಅವಳಿಗಿಂತ ಮುಂಚೆ ನಾನು ತಗೊಂಡು ಬಂದೆ!

***

ವ್ಯತ್ಯಾಸ

ಸೂರಿ: ಮಾಸ್ಟ್ರೇ, ಇವನು ನನ್ನ ಮಗ.

ಮೇಷ್ಟು: ಕುದುರೆ ಹಾಗೂ ಆನೆಗೂ ಐದು ವ್ಯತ್ಯಾಸ, ಹೇಳು.

ಮರಿ ಸೂರಿ: ಕುದುರೆಗೆ ಹಿಂದೆ ಮಾತ್ರ ಬಾಲವಿರುತ್ತದೆ. ಆನೆಗೆ ಎರಡು ಕಡೆ ಬಾಲ ಇರುತ್ತದೆ.

***

ಉತ್ತರ ಯಾಕಿಲ್ಲ?

ಸೂರಿ: ಸರ್ ಇದೇನು?

ಮೇಷ್ಟು: ಪ್ರಶ್ನೆ ಪತ್ರಿಕೆ.

ಸೂರಿ: ಮತ್ತೆ ಇದೇನು?

ಮೇಷ್ಟ್ರು: ಉತ್ತರ ಪತ್ರಿಕೆ.

ಸೂರಿ: ಎನ್ ಸರ್, ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳಿವೆ. ಆದರೆ ಉತ್ತರ ಪತ್ರಿಕೆಯಲ್ಲಿ ಉತ್ತರ ಯಾಕಿಲ್ಲ?!

***

ಶಬ್ಧ ಮಾಲಿನ್ಯ

ಮೇಷ್ಟ್ರು: ಶಬ್ದಮಾಲಿನ್ಯ ಕಡಿಮೆ ಮಾಡುವುದಕ್ಕೆ ಏನು ಮಾಡಬೇಕು?

ಸೂರಿ: ನಮ್ಮ ಕಿವಿ ಮುಚ್ಚಿಕೊಳ್ಳಬೇಕು

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ