ನಿನ್ನ ವಿನಹ ಬದುಕಿಂದು,ಮತ್ತೆ ಇಹುದೇ ನನ್ನಲಿ

ನೀನೆ ಇಲ್ಲವೆಂದು ಈಗ,ಹೇಳ ಬಹುದೇ ನನ್ನಲಿ

 

ಬಾನ ಬಯಲ ಚಂದಿರನು,ಅತ್ತ ದಿನವು ಎಲ್ಲಿದೆ 

ಮೌನವಾದ ಮನದ ನೋವು,ಕಾಣದೇ ನನ್ನಲಿ 

 

ನಗುವಿನಲ್ಲಿ ಮೊಗವು ಅರಳೆ, ತಾವರೆಯ ರೀತಿ

ಕಾಡಿ ಬೇಡುತಿರಲು ಪ್ರೇಮ ಹುಟ್ಟದೇ ನನ್ನಲಿ

 

ಪ್ರೀತಿಯೆಂಬ ಸುಖದ ಅಮಲು, ಹೀಗೆ ಸೆಳೆದಿದೆ 

ಮೋಹದೊಳಗೆ ಬಳಲುತಿರಲು,ಸೇರದೇ ನನ್ನಲಿ 

 

ರವಿಯ ಕಿರಣ ಸುತ್ತ ಚೆಲ್ಲೆ,ಬೆಳಗಾಯಿತೆ ಈಶ

ರಾತ್ರಿಯೆಲ್ಲ ಸವಿಯ ಕನಸು,ಬಾರದೇ ನನ್ನಲಿ

 

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ