ಬನ್ನಿ, ನಮ್ಮದು ಮಾರಾಟ ಕೇಂದ್ರ. ಇಲ್ಲಿ ನಿಮ್ಮ ನೆನಪು, ನೋವು, ಮೋಸ, ತ್ಯಾಗ ಎಲ್ಲವನ್ನು ತೆಗೆದುಕೊಳ್ಳುತ್ತೇನೆ. ನೀವು ಕೊಟ್ಟ ಪ್ರಮಾಣಕ್ಕೆ ಸರಿಯಾಗಿ ಸಮಯವನ್ನು ನಾವು ನೀಡುತ್ತೇವೆ. ನಾವು ಕೊಟ್ಟ ಸಮಯವನ್ನು ಪಡೆದುಕೊಂಡ ನೀವು ನಿಮ್ಮ ಬದುಕಿನ ಅದ್ಭುತ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳಬಹುದು ಮತ್ತೆ ನೆನಪಿಸಿಕೊಳ್ಳಬಹುದು. ನೀವು ಕೊಟ್ಟ ನೆನಪುಗಳಿಗೆ ಸರಿಯಾದ ಮೌಲ್ಯವನ್ನು ನಿಗದಿ ಮಾಡುವವರು ನಾವು. ಇಲ್ಲಿ ಮಾತ್ರ ಬರೀ ಸಮಯವನ್ನು ನೀಡುವುದಿಲ್ಲ . ಕೊಟ್ಟು ಪಡೆದುಕೊಳ್ಳುಬಹುದು. ಹೀಗೆ ಜಾಹೀರಾತಿನ ದೊಡ್ಡ ಫಲಕವನ್ನು ನೋಡಿ ಮೊದಲ ದಿನ ಯಾರು ನಂಬಲಿಲ್ಲ ಆದರೆ ಒಂದಷ್ಟು ಜನಗಳಿಗೆ ಅದರಿಂದ ಉಪಯೋಗವಾದ ಮೇಲೆ ಸರತಿಯ ಸಾಲು ಹೆಚ್ಚುವುದಕ್ಕೆ ಆರಂಭವಾಯಿತು. ಹೆಚ್ಚು ಹೆಚ್ಚು ಜನರು ಬಂದು ತಮ್ಮ ಜೀವನದಲ್ಲಿ ಆಗಿರುವ ಕಳೆದುಕೊಂಡ ಎಲ್ಲವನ್ನು ಕೊಟ್ಟು ಸಮಯವನ್ನ ಪಡೆದುಕೊಂಡು ನಗುವುದನ್ನು ಕಲಿತರು ಬದುಕುವುದನ್ನು ಕಲಿತರು ತಪ್ಪುಗಳನ್ನ ತಿದ್ದಲು ಕಲಿತರು. ಅಂಗಡಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಾ ಹೋಯಿತು ಇಡೀ ಊರು ನೆಮ್ಮದಿಯಾಗಿತ್ತು. ಸಂಭ್ರಮದಿಂದ ಮತ್ತೆ ಹೊಸ ಬದುಕನ್ನ ಕಟ್ಟಿಕೊಂಡಿತು. ಈ ಅಂಗಡಿ ನಿಮ್ಮೂರಿಗೆ ಬೇಕಾದರೆ ತಿಳಿಸಿ ಕಳುಹಿಸಿ ಕೊಡುತ್ತೇವೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!