ಉಡುಪಿ ಪಲಿಮಾರು ಮಠದ "ಶ್ರೀಸರ್ವಮೂಲ"

ಉಡುಪಿಯ ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಅಷ್ಟಮಠಗಳಲ್ಲಿ ಒಂದಾದ  ಶ್ರೀ ಪಲಿಮಾರು ಮಠದ ಶ್ರೀಮದ್ ಹೃಷಿಕೇಶತೀರ್ಥ ಸ್ವಾಮಿಯರ್ ಸ್ಮಾರಕ ಟ್ರಸ್ಟ್ (ರಿ) ನ ಶ್ರೀ ವಿದ್ಯಾಮಾನ್ಯ ಪ್ರಕಾಶನವು ಹೊರತರುತ್ತಿರುವ ಮಾಸಪತ್ರಿಕೆಯಾಗಿದೆ "ಶ್ರೀಸರ್ವಮೂಲ".

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪತ್ರಿಕೆಯ ಸಂಸ್ಥಾಪಕರು. ೨೦೧೦ರಲ್ಲಿ ಆರಂಭವಾದ ಸರ್ವಮೂಲ, ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬರುತ್ತಿದೆ. ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ ಉಡುಪಿ ಪ್ರಕಾಶಕರು.  ಶ್ರೀಮತಿ ಸುಜಾತ ವಿ. ಭಟ್ ಮುದ್ರಕರು. ಮೈಸೂರಿನ ರಮ್ಯಾ ಕ್ರಿಯೆಷನ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.

ಆರಂಭದಲ್ಲಿ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ ಪ್ರಧಾನ ಸಂಪಾದಕರಾಗಿದ್ದರು. ವಿದ್ವಾನ್ ಬಲರಾಮ ಭಟ್ ಸಂಪಾದಕರಾಗಿದ್ದರು. ಪ್ರಸ್ತುತ ವಿದ್ವಾನ್ ಬಲರಾಮ ಭಟ್ ಉಡುಪಿ ಪ್ರಧಾನ ಸಂಪಾದಕರಾಗಿದ್ದಾರೆ. ಕಡೆಕಾರ್ ಶ್ರೀಶ ಭಟ್ ಸಂಚಾಲಕರು. ವಿದ್ವಾನ್ ಮೋಹನಾಚಾರ್ಯ ಬೆಂಗಳೂರು, ವಿದ್ವಾನ್ ಗಿರೀಶ್ ಉಪಾಧ್ಯಾಯ ಕುತ್ಯಾರು, ಡಾ. ವಂಶೀಕೃಷ್ಣ ಭಟ್ ಉಡುಪಿ ಹಾಗೂ ವಿದ್ವಾನ್ ಬಿ. ಶ್ರೀನಿವಾಸ ಭಟ್ ಉಡುಪಿ  ಸಂಪಾದಕ ಮಂಡಳಿ ಸದಸ್ಯರಾಗಿದ್ದಾರೆ.

ಜೀವನ್ ರಾಜ್ ಭಟ್ ಉಡುಪಿ ಅಕ್ಷರ ವಿನ್ಯಾಸಕರು. ರಘುನಂದನ ಶರ್ಮ ಉಡುಪಿ ಹಾಗೂ ಜನಾರ್ದನ ಆಚಾರ್ಯ ಉಡುಪಿ ಪುಟ - ಮುಖಪುಟ ವಿನ್ಯಾಸಕರಾಗಿದ್ದಾರೆ.

೪೪ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುವ "ಶ್ರೀಸರ್ವಮೂಲ" ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೨೦೦ ರೂಪಾಯಿ. ಹತ್ತು ವರ್ಷಕ್ಕೆ ೨೦೦೦ ರೂಪಾಯಿ ಮತ್ತು ಪೋಷಕತ್ವ ಮೊತ್ತ ೧೦,೦೦೦ ರೂಪಾಯಿಗಳು. ವೇದ, ಉಪನಿಷತ್ತು, ಪುರಾಣಗಳು, ದಾಸ ಸಾಹಿತ್ಯ ಸಹಿತ ಧಾರ್ಮಿಕ - ಅದ್ಯಾತ್ಮಿಕ ಲೇಖನಗಳಿಗೆ ಪತ್ರಿಕೆ ಮೀಸಲಾಗಿದೆ. ಧಾರ್ಮಿಕ ಪ್ರಶ್ನೋತ್ತರಗಳ 'ನೆನಪಿನಂಗಳ' ಮತ್ತು ಪದಬಂಧವೂ ಇದೆ.

ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರ ಸಂದೇಶಗಳು, ಚಿಂತನೆಗಳು ಪತ್ರಿಕೆಯ ಖಾಯಂ ಅಂಕಣವಾಗಿದೆ. ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಬೊಮ್ನರಬೆಟ್ಟು ಶ್ರೀನಿವಾಸ ಭಟ್ಟ, ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ || ಎನ್. ವೆಂಕಟೇಶಾಚಾರ್ಯ, ಕೃಷ್ಣಸಖ ಮುದರಂಗಡಿ, ವಿದ್ವಾನ್ ಗುರುಪ್ರಸಾದ ಭಟ್ ದೂಪದಕಟ್ಟೆ, ವಾಸುದೇವ ಉಪಾಧ್ಯಾಯ ಕಲ್ಮಂಜೆ, ಶ್ರೀಮತಿ ರಾಧಿಕಾ ವಿ. ಉಪಾಧ್ಯಾಯ ಕಲ್ಮಂಜೆ, ನಿಡಗುಂದಿ ರಘುನಂದನ ಶರ್ಮ, ವಿದ್ವಾನ್ ಶಿಶಿರ ಜೋಯಿಸ, ವಿದ್ವಾನ್ ಬಲರಾಮ ಭಟ್ಟ, ವೇದಮೂರ್ತಿ ಅನಂತಮೂರ್ತಿ ಭಟ್ಟ ಬೆಳ್ಳರ್ಪಾಡಿ, ವಿದ್ವಾನ್ ಲಕ್ಷ್ಮೀಶ ಭಟ್ಟ ಮಣಿಪುರ, ಶ್ರೀಮತಿ ವಾಜನೀ ಲಕ್ಷ್ಮೀಶ ಭಟ್ಟ ಉಡುಪಿ, ಸಂತೋಷ್ ಕುಮಾರ್ ಭಟ್ ಭಕ್ರೆಮಠ, ಡಾ || ವಂಶೀಕೃಷ್ಣ ಆಚಾರ್ಯ ಪುರೋಹಿತ್ ಮುಂತಾದವರು "ಶ್ರೀಸರ್ವಮೂಲ" ಮಾಸಪತ್ರಿಕೆಯ ಖಾಯಂ ಲೇಖಕರಾಗಿರುತ್ತಾರೆ.

~ ಶ್ರೀರಾಮ ದಿವಾಣ