ದೇವರಿಗೆ ದಾರಿ ತಪ್ಪಿದೆ, ಆತ ಅದ್ಭುತಗಳನ್ನ ಸೃಷ್ಟಿಸಿ ತನ್ನೂರಿಗೆ ಹೊರಟು ಹೋಗಿದ್ದ ಒಂದಷ್ಟು ಸಮಯದ ನಂತರ ತಾನು ಸೃಷ್ಟಿಸಿದ ಊರು ಹೇಗಿದೆ ಅಂತ ನೋಡೋದಕ್ಕೆ ಹೊರಟು ಬಂದಿದ್ದ, ಹಾಗೆ ಹೊರಟು ಬರ್ತಾ ಹೋದವನಿಗೆ ತಾನು ಸೃಷ್ಟಿಸಿದ ಊರು ತುಂಬಾ ಬದಲಾಗಿದ್ದು ತಿಳಿಯಿತು. ಪ್ರೀತಿಯನ್ನು ಹಂಚಬೇಕು ಅಂತ ತಿಳಿಸಿಕೊಟ್ಟ ಊರಲ್ಲಿ ದ್ವೇಷ, ಅಸೂಯೆ, ಮೋಸ, ವಂಚನೆಗಳು ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದವು. ಇನ್ನೊಬ್ಬರ ಏಳಿಗೆ ಬಯಸ ಬೇಕೆನ್ನುವ ಮನಸ್ಸನ್ನು ಸೃಷ್ಟಿಸಿದವನಿಗೆ ಇಲ್ಲಿ ಕೊಂದು ತಿಂದು ಬದುಕುವ ರಾಶಿ ಮನಸ್ಸುಗಳು ಅಲ್ಲಲ್ಲಿ ಓಡಾಡುತ್ತಿದ್ದವು, ಯಥೇಚ್ಛವಾಗಿ ನೀಡಿದ ನೀರು, ಬೆಳಕು, ಗಾಳಿ ಮಲಿನವಾಗಿ ದೇವರಿಗೆ ಉಸಿರಾಡಲೇ ಕಷ್ಟವಾಗುತ್ತಿತ್ತು. ಒಳಿತನ್ನ ಬಯಸುವ ಮನಸ್ಸುಗಳೆಲ್ಲವೂ ಊರು ಬಿಟ್ಟಿದ್ದವು, ತಾನು ಮಾತ್ರ ಬದುಕಬೇಕು ಅನ್ನುವ ಕೆಟ್ಟ ಕಳೆ ಗಿಡಗಳು ಹೆಚ್ಚು ಹುಟ್ಟಿಕೊಂಡಿದ್ದವು. ಮತ್ತಿದನ್ನ ಬದಲಾಯಿಸುವ ಸ್ಥಿತಿ ಹೇಗೆ ಅಂತ ದೇವರೇ ಚಿಂತೆಯಲ್ಲಿ ಕುಳಿತುಬಿಟ್ಟನಂತೆ, ಈಗ ನಾವು ದೇವರು ಸೃಷ್ಟಿಸಿದ ಆ ಮೂಲ ಊರನ್ನು ಹುಡುಕ ಹೊರಟರೆ ವಿಳಾಸವಿಲ್ಲದ ಪತ್ರವಾಗುತ್ತದೆ, ದೇವರು ಈಗಲೂ ಕಾಯ್ತಾ ಇದ್ದಾನೆ ತಾನು ಸೃಷ್ಟಿಸಿದ ಊರಿಗೆ...
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!