ನಾಗರಬಾವಿಗಿಂತ 2 ಕಿ.ಮೀ ಮುಂದೆ ಸಿಗುವ ನೆಲ್ಲಿಕಟ್ಟೆಯ ಅಶ್ವತ ಮರದ ಬಳಿ ಅವನು ಕುಳಿತಿರುತ್ತಾನೆ. ನೀವು ಅವನ ಬಳಿ ಹೋಗಿ ಮಾತನಾಡಿಸಿದರೆ ನಿಮಗೆ ಬದುಕಿನ ಇನ್ನೊಂದು ಮಗ್ಗಲು ಪರಿಚಯವಾಗುತ್ತದೆ ಆತನ ವಾದವು ವಿಚಿತ್ರವಾಗಿರುತ್ತದೆ. "ಹುಟ್ಟುಹಬ್ಬ ಪ್ರತಿ ವರ್ಷ ಬರ್ತದೆ ಅದನ್ನ ಸಂಭ್ರಮಿಸುವುದಕ್ಕಿಂತ ಜೀವನದಲ್ಲಿ ಒಮ್ಮೆ ಸಿಗುವ ಸಾವನ್ನ ಸಂಭ್ರಮಿಸುವವರಾಗಬೇಕು. ಆ ಕೊನೆಯ ಕ್ಷಣದಲ್ಲಿ ಉಸಿರು ನಿಲ್ಲುವ ವೇಳೆಗೆ ಬದುಕು ಸಾರ್ಥಕ ಅನ್ನಿಸಿಕೊಳ್ಳಬೇಕು. ನನ್ನ ಆಲೋಚನೆಗಳೆಲ್ಲವೂ ಪೂರ್ಣಗೊಂಡಿದೆ ಕನಸುಗಳು ಸಾಕಾರವಾಗಿದೆ ಅನ್ನುವ ನೆಮ್ಮದಿ ಇರಬೇಕು, ಯಾರನ್ನು ದ್ವೇಷವಿಲ್ಲದೆ ಪ್ರೀತಿಯನ್ನೇ ಜಗತ್ತಿಗೆ ಹಂಚಿದ ತೃಪ್ತಿ ಇರಬೇಕು, ಆ ದಿನ ಸಾಯ್ಬೇಕು ಸಾವನ್ನ ಕಾಯುತ್ತಾ ಪ್ರತಿಕ್ಷಣ ಮುಖದಲ್ಲಿ ನಗು ತುಂಬಿ ಜೀವಿಸಬೇಕು. ಸಾವಿನ ರಾಜ ಕಣ್ಣೆದುರು ಬಂದು ನಿಂತಾಗ ಪ್ರೀತಿಯಿಂದವನನ್ನಪಿಕೊಳ್ಳುವ ಧೈರ್ಯ ನಮ್ಮಲ್ಲಿರಬೇಕು, ಹೀಗೆ ನೀ ಬದುಕಿದರೆ ಅದು ನಿಜವಾದ ಬದುಕು, ಅವನ ಮಾತು ವಿಚಿತ್ರ ಅಂತ ಅನಿಸಿ, ಅದನ್ನು ಒಪ್ಪಿಕೊಳ್ಳುವುದಕ್ಕೂ ಧೈರ್ಯವಿಲ್ಲದೆ ಹಾಗೆ ವಾಪಸು ಬಂದುಬಿಟ್ಟೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!