ಪ್ರತಿಯೊಂದು ಕಡೆಯೂ ಕಥೆಗಳು ಹುಟ್ಟಲು ಕಾಯುತ್ತಿವೆ. ಆ ಕತೆಗಳಿಗೆ ತಮ್ಮಿಂದಾಗಬಹುದಾದ ಒಳಿತು ಕೆಡುಕುಗಳ ಅರಿವಿರುವುದಿಲ್ಲ. ಕ್ಷಣದಲ್ಲಿ ರೂಪಗಳನ್ನು ಬದಲಿಸಿಕೊಂಡು ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಎದುರಿದ್ದವನು ನಂಬಿಯೋ ನಂಬದೆಯೋ ಮುಂದೆ ದಾಟಿಸಿಕೊಂಡು ಹೋಗುತ್ತದೆ. ಜೊತೆಗೆ ಆ ಕಥೆ ಬಯಸುವುದು ತನ್ನನ್ನು ವರ್ಣಿಸುವವ ಹೇಳುವವ ಎಷ್ಟು ನಾಜೂಕಾಗಿ ಹೇಳಿದ್ದಾನೆ ಅನ್ನೋದನ್ನ. ಹಾಗಾಗಿ ಅವುಗಳು ನಾಲಗೆಗಳನ್ನು ಕಾಯುತ್ತಿದ್ದಾವೆ, ಕಿವಿಯ ಮೂಲಕ ದಾಟಿ ಮನಸಿನೊಳಗೆ ಒಂದಷ್ಟು ಅಲೆಗಳೆಬ್ಬಿಸಿದಾಗ ಕಥೆಗಳು ಸಾರ್ಥಕವನ್ನ ಪಡೆದುಕೊಳ್ಳುತ್ತದೆ. ಕೆಲವೊಂದು ಕಥೆಗಳು ಹಲವು ವರ್ಷಗಳ ಕಾಲ ಜೀವಿಸಿದರೆ ಕೆಲವು ಕ್ಷಣದಲ್ಲಿ ನಾಶವಾಗುತ್ತದೆ .ಕೆಲವೊಂದು ಕಥೆಗಳು ಹುಟ್ಟುವುದಕ್ಕಿಂತ ಮೊದಲೇ ಸತ್ತು ಹೋಗುತ್ತವೆ. ನಮ್ಮ ಮನೆಯಲ್ಲೂ ನಮ್ಮೊಳಗೂ ಕತೆಗಳು ಕಾಯುತ್ತಿವೆ ನಾವು ಯಾವ ದಾರಿ ತೋರಿಸುತ್ತೇವೆ ಅನ್ನೋದು ನಮ್ಮ ನಾಲಗೆ ಬಿಟ್ಟದ್ದು....

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ