‘ಹಳದಿ ಕಣ್ಣಿನ ಸಾವು’ ಇದು ಡಿ ಎಸ್ ಚೌಗಲೆ ಅವರ ಕಥಾ ಸಂಕಲನ. ತಮ್ಮ ಈ ಹೊಸ ಕಥಾ ಸಂಕಲನದ ಕುರಿತು ಅವರು ಹೇಳಿರುವುದು ಹೀಗೆ… “ಇತ್ತೀಚಿನ ಹಲವು ವರ್ಷಗಳಲ್ಲಿ ನನ್ನಿಂದ ಹುಟ್ಟಿದ ಕತೆಗಳಿವು. ಇಲ್ಲಿ ಒಂದೆಡೆ ಸಂಕಲಿತಗೊಂಡಿವೆ. ನನಗೆ ಓದುಗರು ಬಹು ಮುಖ್ಯ. ಅವರಿಲ್ಲದಿದ್ದರೆ ನಮ್ಮ ಅಕ್ಷರ ಪದಗಳಿಗೇನು ಬೆಲೆ! ಅವರಿಗೆ ಕೃತಜ್ಞ, ಮಯೂರದಲ್ಲಿ ಬಂದ 'ರೂಹು ಶಬುದಗಳಾಚೆಗಿನ ಬೆಳಗು' ಕತೆಯನ್ನು ಒಬ್ಬರು ಅಪರಿಚಿತ ಹಿರಿಯ ಓದುಗರು ಓದಿದರು. ಅವರು ಬೆಂಗಳೂರು ಜೆಪಿನಗರ ನಿವಾಸಿ. ಮುಂಬೈಯಲ್ಲಿ ಮೂರು ದಶಕಗಳ ಕಾಲ ನೌಕರಿ ಮಾಡಿ ತಾಲ್ನಾಡಿಗೆ ಮರಳಿ ಬಂದವರು. ಅವರ ಮೇಲೆ ಆ ಕತೆಯೂ ಅದೆಷ್ಟು ಪರಿಣಾಮ ಬೀರಿತು ಅಂದರೆ; ಮಯೂರ ಕಚೇರಿಗೆ ಫೋನ್ ಮಾಡಿ ನನ್ನ ನಂಬರ್ ಕೇಳಿದರು. ಸಿಗದಿದ್ದಾಗ ಸ್ವತಃ ಕಚೇರಿಗೆ ಹೋಗಿ ಪಡೆದರು. ಆನಂತರ ನನಗೆ ಫೋನ ಮಾಡಿದರು. ಇಂಗ್ಲೀಷ್ ಕನ್ನಡ ಮಿಶ್ರಿತ ಆಪ್ತ ಭಾಷೆಯ ಸಂವಹನ ಅವರದು. 'ಇದು ಶೇಕಡ ೪೦ ರಷ್ಟು ನನ್ನದೇ ಕತೆ, ಐ ಲೈಕ್ಡ ಸೋ ಮಚ್' ಅಂದರು. ನಾನು- 'ಇದು ನಿಮ್ಮದು ನನ್ನದು ಮತ್ತು ಎಲ್ಲರ ಕತೆ. ಥ್ಯಾಂಕ್ಯೂ' ಅಂತ ಹೇಳಿದೆ. ನಕ್ಕು ಸಂತಸ ಪಟ್ಟರು. ಅವರಂಥ ಓದುಗರ ಪ್ರೀತಿ, ವಿಶ್ವಾಸ ದೊಡ್ಡದು, ಓದುಗರ ಓದುವ ಪ್ರೀತಿಗೆ ಋಣಿಯಾಗಿರುವೆ. ಹೀಗಾಗಿ ಈ ಕೃತಿಯನ್ನು ನನ್ನ ಕತೆಗಳಿಗೆ ಜೀವ ತುಂಬಿದ ಮಣ್ಣಿಗೆ ಮತ್ತು ಓದುಗರಿಗೆ ಅರ್ಪಿಸಿದ್ದೇನೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!