ವರಲಕ್ಷ್ಮಿ ದಯೆ ತೋರು ಬಾರೆ 

ಕರುಣದಲಿ ಹರಿ ಚರಣ ತೋರೆ 

ವರ ಬೇರೆ ಯಾಕೆನಗೆ ಹರಿಸಿರಿಯ ಜೊತೆಗಿರಲು 

ಚರಣ ಸೇವೆಯ ಗೈವ ಭಾಗ್ಯ ನೀಡಮ್ಮಾ 

 

ಹರಿ ಹೃದಯವಾಸಿನಿಯೇ ಮಾತೆ 

ನಿರತ ನಂಬಿದೆನಮ್ಮ ಧಾತೆ 

ಅರಿವಿನಾ ಜ್ಯೋತಿಯನು ಎನ್ನೊಳಗೆ ಬೆಳಗುತಲಿ 

ಹರಿಚರಣದಾ ಪಥವ ತೋರಿ ಪೊರೆಯಮ್ಮ 

 

ಹಲವು ಕಾಲದ ಬಯಕೆಯಮ್ಮ 

ಹಲುಬುತಿಹೆ ಹರಿ ಪದಕೆ ನಿಮ್ಮ -

ನಿಲಯದಾ ಬಾಗಿಲನು ಎನಗಾಗಿ ತೆರೆಯುತಲಿ 

ಒಲವಿನರಸನ ಪದವನೊಮ್ಮೆ ತೋರಮ್ಮ 

 

ಶೇಷನೊಳು ಮಲಗಿರುವನಂತೆ 

ಕೇಶವನ ಬಳಿ ಲಕುಮಿಯಂತೆ

ದಾಸರೆಲ್ಲರೂ ಕೂಡಿ ಪಾಡಿದಾ ನುಡಿ ಕೇಳಿ 

ಆಸೆ ಮನದೊಳು ನಿಮ್ಮ ಬಳಿ ಬರುವೆನಮ್ಮಾ 

 

ವದನದೊಳು ಕಿರುನಗೆಯದಂತೆ 

ಹೃದಯದೊಳು ಕರುಣೆ ಕಡಲಂತೆ 

ಹದನವರಿಯನು ನಿಮ್ಮ ಮದನಮೋಹನ ಹರಿಯ 

ಕದವ ತೆರೆ ಮುದದೊಳಗೆಯೊಮ್ಮೆ ನೋಡುವೆನಮ್ಮ

 

-ಕುಸುಮಾವತಿ ಚಂದ್ರಶೇಖರ ಶೆಟ್ಟಿ ನೇರಳಕಟ್ಟೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ