ಹೆಣ್ಣಿನ 

ಕಣ್ಣೀರಿಗೆ ಬಣ್ಣವಿದ್ದಿದ್ದರೆ

ತಾವೇಳಿದ ಬಣ್ಣದ ಕಣ್ಣೀರನ್ನೇ ಸುರಿಸಬೇಕೆಂದು 

ಕಣ್ಣೀರಿಗೆ ಹಣವಿದ್ದಿದ್ದರೆ

ತಾವೇಳಿದ ರೇಟಿಗೆ ನೀಡಬೇಕೆಂದು

ಕಣ್ಣೀರಿಗೆ ಮುತ್ತುಗಳುದುರಿದ್ದರೆ

ತಮಗೇ ಮಾತ್ರವೇ ನೀಡಬೇಕೆಂದು

ಕಣ್ಣೀರಿಗೆ ಮಾತುಗಳಿದ್ದಿದ್ದರೆ

ತಾವೇಳಿದಂತೆ ನುಡಿಯಬೇಕೆಂದು

ಕಣ್ಣೀರಿಗೆ ರೂಪವಿದ್ದಿದ್ದರೆ

ತಾವೆಣಿಸಿದ ರೂಪದಲ್ಲೇ ಕಾಣಬೇಕೆಂದು

ಕಣ್ಣೀರಿಗೆ ಬಟ್ಟೆ ತೊಡುವಂತಿದ್ದರೆ

ತಾವೇಳಿದ ಬಟ್ಟೆಯನ್ನೇ ತೊಡಬೇಕೆಂದು

ಕಣ್ಣೀರಿಗೆ ಸ್ವಾತಂತ್ರ್ಯವಿದ್ದಿದ್ದರೆ

ತಾವೇಳಿದ ಬಂದೀಖಾನೆಯಲ್ಲೇ ಇರಬೇಕೆಂದು

ಖಂಡಿತಾ

ತಾಕೀತು ಮಾಡುತ್ತಿತ್ತು..

ಹೇರಿಕೆ ಮಾಡುತ್ತಿತ್ತು..

ಪುರುಷಾಧಿಪತ್ಯ

ಜಾಗತಿಕ

ಮಾರುಕಟ್ಟೆ ಶಕ್ತಿಗಳು

 

ಆದರೂ

ಹೆಣ್ಣಿನ ಕಣ್ಣೀರು 

ಇಂದು 

ಭಿಕರಿಗಿಡಲಾಗಿದೆಯಲ್ಲ

ಮಾರುಕಟ್ಟೆಯಲ್ಲಿ

ಸೀರಿಯಲುಗಳಲ್ಲಿ

ರಿಯಾಲಿಟಿ ಶೋಗಳಲ್ಲಿ

ವೇದಿಕೆಗಳ ಚಾವಡಿಗಳಲಿ ....

- ನಂದಕುಮಾರ್ ಕುಂಬ್ರಿ ಉಬ್ಬು

ಚಿತ್ರ ಕೃಪೆ: ಇಂಟರ್ನೆಟ್ ತಾಣ