ಮತ್ತೆ ಕೆಲಸಕ್ಕೆ ಹೊರಡಬೇಕು. ಮತ್ತದೇ ಮುಖಗಳು, ಅದೇ ರಗಳೆ, ಅದೇ ಕೆಲಸದ ಒತ್ತಡ, ಎಷ್ಟು ದುಡಿದರೂ ಗೌರವವಿಲ್ಲದ ಹುದ್ದೆ, ಪ್ರತೀ ದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಡಲು ಉತ್ಸಾಹವಿಲ್ಲ, ಬೇಸರದ ಮುಖ ಹೊತ್ತು ಅನಿವಾರ್ಯವಾಗಿ ಮನೆಯಿಂದ ಹೊರಡುತ್ತಾಳೆ ರಾಜಿ. ರಾಜಿ ಮಾಡಿಕೊಳ್ಳದೆ ಕೆಲಸ ನಿರ್ವಹಿಸಬೇಕು. ಅದೇ ದಾರಿಯಲ್ಲಿ ಸಾಗುವಾಗ ಎದುರಿನಿಂದ ಸಿಗುವ ಬಿಜಾಪುರದಿಂದ ಬಂದು ಇಲ್ಲಿ ಕೂಲಿ ಕೆಲಸದಲ್ಲಿ ಬದುಕು ಕಟ್ಟಿಕೊಂಡ ಹೆಂಗಳೆಯರ ಗುಂಪು ಸಿಗುತ್ತದೆ. ಪ್ರತೀ ದಿನವೂ ನಗುತ್ತಾ ಸಂಭ್ರಮದಿಂದ ಕೆಲಸಕ್ಕೆ ಹೊರಡುತ್ತಾರೆ, ಉತ್ಸಾಹದಿಂದ ಕುಶಲೋಪರಿ ವಿಚಾರಿಸುತ್ತಾ, ಹಳೆಯ ಕತೆಗಳನ್ನ ಮಾತಾಡುತ್ತಾ, ನಾಳಿನ ಬದುಕಿನ ಕನಸು ಕಾಣುತ್ತಾ ನಡೆಯುತ್ತಾರೆ. ಸಿಗುವ ಸಂಬಳ ಅಲ್ಪವಾದರೂ ದುಡಿಮೆಯಿಂದ ದೇಹ ಹುಡಿಯಾದರೂ ನಗು, ಉತ್ಸಾಹ ಮಾಸಿಲ್ಲ, ಇವರನ್ನ ಕಂಡು ಅಸೂಯೆ ಪಡುತ್ತಲೇ ಲಕ್ಷ ಸಂಬಳದ ಕೆಲಸಕ್ಕೆ ರಾಜಿ ನಡೆಯುತ್ತಾಳೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!