ಕಟ್ಟಿದ ಕನಸೆಲ್ಲಾ ಕಟ್ಟೆಯೊಡೆದ ನೀರಂಗೆ

ಹರಿದ್ದೋದೊ ಇಂಗ್ಲೋದೋ ಭೂಮ್ಯಾಗೆ | ಹೇ ಶಿವನೇ 

ಬೆಟ್ಟದ ಮ್ಯಾಗಿನ ಮರ ಹತ್ತಿ ಕೈ ಬಿಟ್ಟಂಗೆ

 

ಅತ್ತಿಯ ಹಣ್ಣಂಗೆ ಮೆತ್ತನೆ ಮನಸಗಳು 

ಹುಡುಕಿದರೆ ಒಳಗೊಂದು ಹುಳವಿಲ್ಲ | ಆ ಹೆಣ್ಣು 

ಎತ್ತ ಹೋದಳೋ ಅವಳ ಸುಳುವಿಲ್ಲ

 

ರೆಂಬೆ - ಕೊಂಬ್ಯಾಗೆ ತುಂಬಿದ ಹೂವಂಗೆ 

ಹಸಿ ಹೊಂಬಾಳೆ ಹೊಡೆದು ನಗುವಂಗೆ | ಆ ಹೆಣ್ಣು 

ಹುಸಿ ಮುನಿಸಿಲ್ಲ ಅವಳ ಮೊಗದಾಗೆ

 

ನೆಲವಿನೊಳಗೆ ಕುಳಿತು ತೂಗುತ್ತಿರುವ 

ಮಡಿಕೆಯೊಳಗಿನ ಬೆಣ್ಣೆಯ ಮಿದುವಂಗೆ । ಆ ಹೆಣ್ಣು

ಮದುಮನೆಯ ಮರೆತು ಎತ್ತ ನಡೆದಾಳೋ

 

ಉಣ್ಣಲು ಹಸಿವಿಲ್ಲ ಕಣ್ಣಿಗೆ ನಿದಿರಿಲ್ಲ 

ತಣ್ಣನೆ ಗಾಳಿ ಬಿಸಿಯಾಯ್ತು|  ಓ ಹೆಣ್ಣೇ 

ಹೊಂಗೆಯ ನೆರಳಾಗಿ ಬಾರಪ್ಪ

 

ನೆತ್ತಿಯ ಸದರಿ ಹೊತ್ತೊತ್ತಿಗೂ ತುತ್ತಿಕ್ಕಿ 

ಬಡವನ ಹೊಟ್ಟೆಯ ತುಂಬೋಳೇ । ಓ ಹೆಣ್ಣೇ 

ಹೊತ್ತಾಯ್ತು ಬಾರೆ ನನ್ನ ಹಟ್ಟಿಗೆ

 

- ರೂಪಾ ಹೊಸದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ