ಸಾಧಿಸಿ ತೋರಿಸಿ!

ಅದು ಕೆಟ್ಟದ್ದು ಇದು ಕೆಟ್ಟದ್ದು 

ಎಂಬುದರ ಜೊತೆಗೆ 

ನಿಮ್ಮದು ಒಳ್ಳೆಯದು 

ಯಾವುದೆಂದೂ ತೋರಿಸಿ!

 

ಅವರು ಕೆಟ್ಟವರು ಇವರು ಕೆಟ್ಟವರು 

ಎಂಬುದರ ಜೊತೆಗೆ 

ನೀವೆಷ್ಟು ಒಳ್ಳೆಯವರು 

ಎಂಬುದನ್ನೂ ತೋರಿಸಿ!

 

ಸಾಧ್ಯವಾದರೆ 

ಜೀವನದಲ್ಲಿ ಒಂದಷ್ಟು 

ಒಳ್ಳೆಯದನ್ನು ಸಾಧಿಸಿ! 

ಒಳ್ಳೆಯದನ್ನು ಸಾಧಿಸಿ ತೋರಿಸಿ!

 

***

ಮಳೆಯಾಗುವಂತೆ!

ಮೋಡಗಳಿಂದ ಮಳೆಯಾಗುವಂತೆ 

ಈ ನಿನ್ನ ಪ್ರೇಮವು! 

ಮೋಡಗಳಿಂದ ಗುಡುಗಾಗುವಂತೆ 

ಈ ನಿನ್ನ ಹುಸಿ ಕೋಪವು! 

ಮೋಡಗಳಿಂದ ಸಿಡಿಲಾಗುವಂತೆ 

ಈ ನಿನ್ನ ಮುನಿಸಿನ ರೋಷವು!

 

ಮೋಡಗಳಿಂದ ಮಿಂಚಾಗುವಷ್ಟೇ 

ಇರಲಿ ನಿನ್ನ ಮನದ ಮುನಿಸು! 

ಮೋಡಗಳಿಂದ ಮಳೆಯಾಗುವಂತೆ 

ಪ್ರೇಮಿಸಿ ಎನ್ನೆದೆಯ ತಣಿಸು! 

ಮೋಡಗಳಿಂದ ಬೆಳೆಯಾಗುವಂತೆ 

ನಮ್ಮಿ ಬಾಳ ಸಂಭ್ರಮದಿ ಬೆಳೆಸು!

-ಮೌನಮುಖಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ