ಹೊಸತಾದ ಮನವೊಂದು ತನುವಿನಲಿ ನಿಂತಿದೆ

ಬಳಿ ಬಂದ ಮುಖವೊಂದು ಒಲವಿನಲಿ ನಿಂತಿದೆ

 

ಕಾಣದೆಯೆ ಕಾಡುವ ಮೋಹವದು ಎಲ್ಲಿದೆಯೊ

ಜೀವನದ ಛಲವೊಂದು ಮಡುವಿನಲಿ ನಿಂತಿದೆ

 

ಹೊಂಗೆಯ  ನೆರಳಿನಲಿ ತಂಪಿದೆಯೋ ಇಲ್ಲವೊ

ಮೌನದಲಿ ಸವಿಯೊಂದು ಚೆಲುವಿನಲಿ ನಿಂತಿದೆ

 

ಗತಿಯಿರದಿಹ ಭಾವನೆಗಳು ತಿರುಗುತಿವೆ ಏತಕೊ

ದಯೆಯಿರುವ ಕನಸೊಂದು ಹೂವಿನಲಿ ನಿಂತಿದೆ

 

ಜೀವನದ ಪಯಣದೊಳು ಸುಖವಿದೆಯೆ ರತ್ನಾ

ನನಸೊಂದು ಹಸಿರಾಗಿ ಬಾಳಿನಲಿ ನಿಂತಿದೆ

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ