ಮುಳುಗುವ ದೋಣಿ ಏರುವಾನೆ
ಮುಳುಗುವುದರಲ್ಲ
ಸಾಯುವುದಕ್ಕೂ ಅಲ್ಲ
ಮುಳುಗುವ ದೋಣಿಯನು
ಏರುವ ಪ್ರಯತ್ನ ಮಾಡುವೆನು!
ಮುಳುಗುವ ಆಸೆಯಿಂದಲ್ಲ!
ಪ್ರೀತಿಯುಳ್ಳವರ ಹೊತ್ತು
ತಿರುಗಿದ ದೋಣಿ
ನೋಡನೋಡುತ ಮುಳುಗುತಿಹುದಲ್ಲಿ!
ಅವರನ್ನೆಲ್ಲರನು
ಉಳಿಸಬಲ್ಲೆ ಎಂಬ ಹಮ್ಮಿನಿಂದಲ್ಲ!
ಆ ಕ್ಷಣಕೆ ಆಕ್ಷಣವೇ ಸಾಟಿ!
ದೋಣಿ ಏರಬೇಕೆಂಬುದೇ ಯೋಚನೆ!
ಬೇರೆ ಯೋಚನೆಗಳು ಹುಟ್ಟುವುದೂ ಇಲ್ಲ!
ಬೇರೇನೂ ಯೋಜನೆಗಳೂ ಇಲ್ಲ!
ಮುಳುಗುವ ದೋಣಿ ಏರುವಾಸೆ
ಮುಳುಗುವುದಕಲ್ಲ|
ಸಾಯುವುದಕೂ ಅಲ್ಲ |
‘ಮೌನಮುಖಿ’
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!